ಮಂಗಳೂರು: ಇಂದು ಗೃಹಮಂತ್ರಿ ಡಾ. ಜಿ. ಪರಮೇಶ್ವರ್ ಜೊತೆಗೆ ದ.ಕ ಜಿಲ್ಲೆಯ ಮುಸ್ಲಿಂ ಮುಖಂಡರು ಸಭೆ ನಡೆಸಿದ್ದಾರೆ.
ಜಿಲ್ಲೆಯಲ್ಲಿ ಶುಕ್ರವಾರ ಮೂವರು ಮುಸ್ಲಿಂ ಯುವಕರ ಮೇಲೆ ಚಾಕು ಇರಿತ ನಡೆಡಿದ್ದು, ಇರಿತಕ್ಕೆ ಒಳಾಗದ ಅಮಾಯಕರಿಗೆ ಸರಕಾರದಿಂದ ಪರಿಹಾರ ನೀಡುವಂತೆ ಗೃಹ ಸಚಿವರಿಗೆ ಮುಸ್ಲಿಂ ಮುಖಂಡರು ಒತ್ತಾಯಿಸಿದ್ದಾರೆ.
ಅಲ್ಲದೆ ಜಿಲ್ಲೆಯಲ್ಲಿ ಕೋಮುವಾದ ಪ್ರಚೋದಿಸುವ ಹೇಳಿಕೆ ನೀಡುತ್ತಿರುವ ನಾಯಕರಿಗೆ ಮಾತಿಗೆ ಬ್ರೇಕ್ ಹಾಕಿಸಬೇಕು. ಪ್ರಚೋದನಕಾರಿ ಹೇಳಿಕೆಯಿಂದಲೇ ಇಂತಹ ಘಟನೆಗಳು ನಡೆಯಲು ಕಾರಣವಾಗುತ್ತಿವೆ. ಕೊಲೆ ನಡೆದ ಮರುದಿನವೇ 3 ಕಡೆಗಳಲ್ಲಿ ಅಮಾಯಕರಿಗೆ ಚೂರಿ ಇರಿತ ಮಾಡಲಾಗಿದೆ. ಇದು ದುರ್ದೈವದ ಸಂಗತಿ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.



















