ದೊಡ್ಮನೆಯಲ್ಲಿ ಸ್ಪರ್ಧಿಗಳ ಮಧ್ಯೆ ಮಾರಾಮಾರಿ ಜೋರಾಗಿದೆ. ವಂಶದ ಕುಡಿಯೇ ಗಿಲ್ಲಿ ವಿರುದ್ಧ ತಿರುಗಿ ಬಿದ್ದಿದೆ. ರಘು ಕೂಡ ಗಿಲ್ಲಿ ವಿರುದ್ಧವೇ ಕೂಗಾಡಿದ್ದಾರೆ. ಗಿಲ್ಲಿ ಕೂಡ ಈಗ ಅಬ್ಬರಿಸಿದ್ದಾರೆ.
ಬಿಗ್‌ಬಾಸ್ ಕೊಟ್ಟ ಟಾಸ್ಕ್‌ನಲ್ಲಿ ಸದಸ್ಯರಿಗೆ 1ರಿಂದ 11 ರ್ಯಾಕಿಂಗ್ ನೀಡಬೇಕಿತ್ತು. ಧನುಷ್ ಅವರು ಎರಡನೇ ಸ್ಥಾನವನ್ನು ಗಿಲ್ಲಿಗೆ ನೀಡಿದರು. `ನಿನ್ನ ವಿಷಯಕ್ಕೆ ಬಂದಾಗ ನೀನು ಸ್ಟ್ಯಾಂಡ್ ತೆಗೆದುಕೊಳ್ತೀಯಾ ಅಂತ ಅನ್ನಿಸಿತು’ ಅಂತ ಗಿಲ್ಲಿಗೆ ಹೇಳಿದ್ದಾರೆ. ಧನುಷ್ ಕೊಟ್ಟ ನಂಬರ್‌ಗೆ ಹಾಗೂ ಮಾತಿಗೆ ರಕ್ಷಿತಾ, ರಘು ಕೆಂಡ ಆದರು.
`ಮನೆ ಕೆಲಸ ಆಗಲಿ ಏನೂ ನಿಭಾಯಿಸಲ್ಲ’ ಅಂತ ಗಿಲ್ಲಿ ಬಗ್ಗೆ ರಕ್ಷಿತಾ ಕಾರಣ ಕೊಟ್ಟರು. `ಮನೆಯಲ್ಲಿ ಶುದ್ಧ ಸೋಮಾರಿ ಅವನೇ . ಆದರೆ ಎರಡನೇ ಸ್ಥಾನದಲ್ಲಿ ಇದ್ದಾರೆ’ ಅವರು ಅಂತ ರಘು ಕಾರಣ ಕೊಟ್ಟರು. ಇದನ್ನು ಕೇಳಿ ಗಿಲ್ಲಿ ಕೆಂಡ ಆಗಿದ್ದಾರೆ. `ಯಾರೂ ಕೇಳಿದರು ಮನೆಕೆಲಸ ಅಂತ ಕಾರಣ ಕೊಡ್ತಾರೆ. ಏನು ಮನೆ ಕೆಲಸಕ್ಕಾ ನಾನು ಬಂದಿದ್ದು’? ಅಂತ ಕೂಗಾಡಿದ್ದಾರೆ. ಗಿಲ್ಲಿ ಮಾತು ರಘುಗೆ ಇನ್ನಷ್ಟು ಕೆರಳಿಸಿದೆ. ಮಾತನಾಡಬೇಡ ಅಂತ ಗಿಲ್ಲಿ ಮೇಲೆ ಕೂಗಾಡಿದ್ದಾರೆ ರಘು. ರಘು ಹಾಗೂ ಗಿಲ್ಲಿ ಮಧ್ಯೆ ಒಳ್ಳೆಯ ಬಾಂಡಿಂಗ್ ಬೆಳೆದಿತ್ತು. ಗಿಲ್ಲಿ ಮಾಡೋ ಕೀಟಲೆಗಳನ್ನು ರಘು ಸಹಿಸಿಕೊಂಡಿದ್ದರು. ಆದರೆ, ಈಗ ಎಲ್ಲವೂ ಬದಲಾಗಿದೆ.
ಇದನ್ನೂ ಓದಿ : ವಿರಾಟ್-ರೋಹಿತ್ ಎದುರಾಳಿಗಳನ್ನು ಅಸಹಾಯಕರನ್ನಾಗಿಸುತ್ತಾರೆ ; ಕೆ.ಎಲ್. ರಾಹುಲ್



















