ಅಬುಜಾ: ಇಂಧನದ ಟ್ಯಾಂಕರ್ ಸ್ಫೋಟಗೊಂಡ ಪರಿಣಾಮ ಬರೋಬ್ಬರಿ 94 ಜನರು ಸಾವನ್ನಪ್ಪಿರುವ ಘಟನೆ ನೈಜೀರಿಯಾದಲ್ಲಿ ನಡೆದಿದೆ.
ಅಲ್ಲದೇ, ಈ ಘಟನೆಯಲ್ಲಿ 50ಕ್ಕೂ ಅಧಿಕ ಜನರು ಗಾಯಗೊಂಡಿದ್ದಾರೆ. ನೈಜೀರಿಯಾದ ತೌರಾ ಸ್ಥಳೀಯ ಸರ್ಕಾರಿ ಪ್ರದೇಶದ ಮಜಿಯಾ ಪಟ್ಟಣದಲ್ಲಿ ಈ ದುರಂತ ಸಂಭವಿಸಿದೆ.
ಉತ್ತರ ನೈಜೀರಿಯಾದಲ್ಲಿ ಚೆಲ್ಲಿದ್ದ ಇಂಧನವನ್ನು ಸಂಗ್ರಹಿಸಲು ಜನ ತೆರಳಿದ್ದ ಸಂದರ್ಭದಲ್ಲಿ ಟ್ಯಾಂಕರ್ ಸ್ಫೋಟಗೊಂಡಿದೆ. ಪರಿಣಾಮ 94 ಜನರು ಸಾವನ್ನಪ್ಪಿದ್ದಾರೆ. ಮಂಗಳವಾರ ತಡರಾತ್ರಿ ಈ ಘಟನೆ ನಡೆದಿದ್ದು, ಸ್ಫೋಟದಿಂದ ಟೋಲ್ ಹೆಚ್ಚಾಗುವ ನಿರೀಕ್ಷೆಯಿದೆ.
ಚಾಲಕನ ನಿಯಂತ್ರಣ ಕಳೆದುಕೊಂಡ ಟ್ಯಾಂಕರ್ ಪಲ್ಟಿಯಾಗಿದ್ದರಿಂದಾಗಿ ಇಂಧನ ಚೆಲ್ಲಿ, ಸ್ಫೋಟಗೊಂಡಿದೆ. ಪರಿಣಾಮ ಅಲ್ಲಿದ್ದ 94 ಜನ ಸಾವನ್ನಪ್ಪಿದ್ದಾರೆ. ಗಾಯಗೊಂಡವರನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಸಾವಿನ ಸಂಖ್ಯೆ ಇನ್ನೂ ಹೆಚ್ಚಾಗುವ ಸಾಧ್ಯತೆ ಇದೆ.