ಕ್ರಿಕೆಟ್ ಆಟಗಾರರಿಗೆ ಗುಡ್ ನ್ಯೂಸ್ ವೊಂದು ಸಿಕ್ಕಿದೆ. ರಣಜಿ ಕ್ರಿಕೆಟ್ ಗೆ ಈಗಾಗಲೇ ಬಿಸಿಸಿಐ ಹೆಚ್ಚು ಒತ್ತು ನೀಡಿದೆ. ರಣಜಿ ಆಡುವ ಆಟಗಾರರಿಗೆ ಪಂದ್ಯದ ದಿನದ ಆಧಾರದ ಮೇಲೆ ವೇತನ ನೀಡಲಾಗುವ ರೂಢಿ ಇದೆ. ಆದರೆ, ಇನ್ನು ಮುಂದೆ ಆಟಗಾರರಿಗೆ ಪ್ರತಿ ತಿಂಗಳು ವೇತನ ನೀಡುವುದಾಗಿ ಕ್ರಿಕೆಟ್ ಸಂಸ್ಥೆ ಘೋಷಿಸಿದೆ. ಮಹಿಳಾ ಕ್ರಿಕೆಟಿಗರು ಮತ್ತು ಪುರುಷ ಆಟಗಾರರು ಇಬ್ಬರಿಗೂ ಸಂಬಳ ಫಿಕ್ಸ್ ಮಾಡುವುದಾಗಿ ಹೇಳಿದೆ. ಅಲ್ಲದೇ, ರಣಜಿ ಕ್ರಿಕೆಟಿಗನ ಪತ್ನಿಗೂ ಪ್ರತಿ ತಿಂಗಳು ವೇತನ ನೀಡಲಾಗುವುದು ಎಂದು ಕೂಡ ಬಿಸಿಸಿಐ ಹೇಳಿದೆ.
ತಿಂಗಳು ತಿಂಗಳು ವೇತನ
ಬರೋಡಾ ಕ್ರಿಕೆಟ್ ಸಂಸ್ಥೆಯ ಅಧ್ಯಕ್ಷ ಪ್ರಣಬ್ ಅಮೀನ್ ಮತ್ತು ಉನ್ನತ ಸಮಿತಿಯ ನೇತೃತ್ವದಲ್ಲಿ, ರಣಜಿ ಆಟಗಾರರನ್ನು ಗಮನದಲ್ಲಿಟ್ಟುಕೊಂಡು ದೊಡ್ಡ ನಿರ್ಧಾರ ತೆಗೆದುಕೊಳ್ಳಲಾಗಿದೆ. ಬರೋಡಾ ಕ್ರಿಕೆಟ್ ಸಂಸ್ಥೆ ಈ ಯೋಜನೆ ಪ್ರಾರಂಭಿಸಿದ್ದು, ಈ ಮೂಲಕ ಈಗ 1 ರಿಂದ10 ರಣಜಿ ಪಂದ್ಯಗಳನ್ನು ಆಡಿರುವ ಆಟಗಾರರಿಗೆ ಪ್ರತಿ ತಿಂಗಳು 10,000 ರೂ. ಮತ್ತು 11 ರಿಂದ 24 ಪಂದ್ಯಗಳನ್ನು ಆಡಿರುವ ಆಟಗಾರರಿಗೆ ಪ್ರತಿ ತಿಂಗಳು 15,000 ರೂ. ವೇತನ ನೀಡಲು ನಿರ್ಧಾರ ಕೈಗೊಳ್ಳಲಾಗಿದೆ. ಮರಣ ಹೊಂದಿದ ರಣಜಿ ಕ್ರಿಕೆಟಿಗರ ವಿಧವಾ ಪತ್ನಿಯರಿಗೂ ಇದರ ಲಾಭ ಸಿಗಲಿದೆ.