ಹಾವೇರಿ: ಕಟ್ಟುನಿಟ್ಟಿನ ಟ್ರಾಫಿಕ್ ರೂಲ್ಸ್ ಜಾರಿಗೆ ತರಲು ಹಾವೇರಿ ಪೊಲೀಸರು ಮುಂದಾಗಿದ್ದಾರೆ. ಇನ್ಮುಂದೆ ಎಲ್ಲೆಂದರಲ್ಲಿ ವಾಹನ ನಿಲ್ಲಿಸಿದರೆ ಫೈನ್ ಬೀಳುತ್ತೆ ಎಂದು ಟ್ರಾಫಿಕ್ ಪೊಲೀಸರು ಎಚ್ಚರಿಕೆ ನೀಡಿದ್ದಾರೆ.
ಶಿಗ್ಗಾವಿ ಪಟ್ಟಣದಲ್ಲಿ ಪೊಲೀಸ್ ಅಧಿಕಾರಿಗಳು ಟ್ರಾಫಿಕ್ ರೂಲ್ಸ್ ಬಗ್ಗೆ ಜಾಗೃತಿ ಮೂಡಿಸುತ್ತಿದ್ದು, ಸರ್ಕಲ್, ರಸ್ತೆ ಅಕ್ಕ ಪಕ್ಕ, ಫುಟ್ಪಾತ್‌ನಲ್ಲಿ ವಾಹನವನ್ನು
ಅಡ್ಡ-ದಿಡ್ಡಿ ನಿಲ್ಲಿಸೋ ಜನರಿಗೆ ಶಿಗ್ಗಾವಿ ಪೊಲೀಸರಿಂದ ಪೆನಾಲ್ಟಿ ಬೀಳುತ್ತದೆ ಎಂದು ಜಾಗೃತಿ ಮೂಡುಸಿದ್ದಾರೆ.
ಪಟ್ಟಣದ ಚೆನ್ನಮ್ಮ ವೃತ್ತ, ಹಳೆ ಬಸ್ ಸ್ಟ್ಯಾಂಡ್ ಮಾರ್ಗ, ಹೊಸ ಬಸ್ ಸ್ಟಾಂಡ್ ಮಾರ್ಗದಲ್ಲಿ ಟಫ್ ರೂಲ್ಸ್ ಜಾರಿ ತರಲಾಗಿದ್ದು, ಶಿಗ್ಗಾವಿ ಸಿಪಿಐ ವೀರಭದ್ರಯ್ಯ ಹಿರೇಮಠ ಅವರು ಈ ಕಟ್ಟುನಿಟ್ಟಿನ ಸಂಚಾರ ನಿಯಮ ಜಾಗೃತಿಯನ್ನು ಮೂಡಿಸಿದ್ದು, ಸಾರ್ವಜನಿಕರಿಗೆ ಸುಗಮ ಸಂಚಾರ ವ್ಯವಸ್ಥೆ ಮಾಡಲು ಟ್ರಾಫಿಕ್ ಸಮಸ್ಯೆ ನಿಯಂತ್ರಣಕ್ಕೆ ಈ ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿಸಿದ್ದಾರೆ.
ಇದನ್ನೂ ಓದಿ : ಯುದ್ಧದ ಪರಿಣಾಮ EV ವಾಹನಗಳಿಗೆ ಡಿಮ್ಯಾಂಡ್…ದಾಖಲೆ ಪ್ರಮಾಣದಲ್ಲಿ ವಾಹನ ಸೇಲ್



















