ಬೆಂಗಳೂರು: ರೇಣುಕಾಸ್ವಾಮಿ (Renukaswamy) ಹತ್ಯೆ ಪ್ರಕರಣದ ಕುರಿತು ಕಿಚ್ಚ ಸುದೀಪ್ (Kichcha Sudeep) ಮಾತನಾಡಿದ್ದಾರೆ.
ಸ್ನೇಹ ಬೇರೆ, ನ್ಯಾಯ ಬೇರೆ, ಜೀವ ಬೇರೆ, ಸಂಬಂಧ ಬೇರೆ, ನಾನು ಯಾರ ಬಗ್ಗೆಯೂ ಮಾತನಾಡುತ್ತಿಲ್ಲ. ಚಿತ್ರರಂಗ ಅಂತ ಬಂದಿದ್ದಕ್ಕೆ ಮಾತಾಡುತ್ತಿದ್ದೇನೆ ಎಂದು ಹೇಳಿದ್ದಾರೆ.
ಹಿಂದೆ ದರ್ಶನ್ ಮೇಲೆ ಚಪ್ಪಲಿ ಎಸೆದಾಗ ಕಿಚ್ಚ ಸುದೀಪ್ ಅವರ ಬೆನ್ನಿಗೆ ನಿಂತಿದ್ದರು. ಈ ಕುರಿತು ಪ್ರಶ್ನಿಸಿದಾಗ, ನಮಗೆ ಯಾವುದಾದರೂ ನೋವು ಆದಾಗ ಆಸ್ಪತ್ರೆಗೆ ಹೋಗಿರುತ್ತೇವೆ. ರಿಪೋರ್ಟ್‌ನಲ್ಲಿ ಏನೂ ಆಗಿಲ್ಲ ಅಂತ ಬಂದಾಗ ಖುಷಿಯಾಗಿ ಮನೆಗೆ ಹೋಗುತ್ತೇವೆ. ಆಗಿದೆ ಅಂತ ಬಂದಾಗ ಟ್ರೀಟ್ಮೆಂಟ್ ತಗೋಬೇಕು. ನಾನು ಈಗ ಆ ಹಂತದಲ್ಲಿದ್ದೇನೆ ಎಂದು ಹೇಳಿದ್ದಾರೆ.
ಸ್ನೇಹ ಬೇರೆ, ನ್ಯಾಯ ಬೇರೆ, ಸಂಬಂಧ ಬೇರೆ, ನಾನು ಯಾರ ಬಗ್ಗೆಯೂ ಮಾತಾಡಿದವನಲ್ಲ. ನನಗೆ ಬೇಕಾಗಿಯೂ ಇಲ್ಲ. ಚಿತ್ರರಂಗ ಅಂತ ಬಂದಿದ್ದಕ್ಕೆ ಮಾತಾಡುತ್ತಿದ್ದೇನೆ. ನಾನು ಚಿತ್ರರಂಗಕ್ಕೆ ಸೇರಿದವನು ಅದಕ್ಕೆ. ಇಲ್ಲಿ ಕೂತು ಜಡ್ಜ್ ಮಾಡಬಾರದು ಎಂದು ಹೇಳಿದ್ದಾರೆ.