ಚಿಂತಾಮಣಿ:ಕುಡಿದ ಮತ್ತಿನಲ್ಲಿ ಓರ್ವನ ಕತ್ತು ಕೊಯ್ದಿರುವ ಘಟನೆಯೊಂದು ತಾಲೂಕಿನ ಕೆಂಚಾರ್ಲಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ಮುರುಗಮಲ್ಲ ಗ್ರಾಮದಲ್ಲಿ ಇಂದು ಬೆಳಗ್ಗೆ ನಡೆದಿದೆ.
ಹೊಸಕೋಟೆ ತಾಲ್ಲೂಕಿನ ನಂದಗುಡಿ ಗ್ರಾಮದ ಸೈಯದ್ ನೌಶಾದ್(40) ಕೊಲೆಯಾಗಿರುವ ವ್ಯಕ್ತಿ. ಈ ಈತ ತನ್ನ ಪತ್ನಿಯೊಂದಿಗೆ ಎರಡು ದಿನಗಳ ಹಿಂದೆ ಗಲಾಟೆ ಮಾಡಿಕೊಂಡು ಮುರುಗಮಲ್ಲ ಗ್ರಾಮಕ್ಕೆ ಸ್ನೇಹಿತರಾದ ಸಾಧಿಕ್ ಮತ್ತು ಮಂಗಳಮುಖಿ ಶಕೀಲಾ ಅವರ ಜೊತೆಗೆ ಬಂದಿದ್ದ. ಆದರೆ, ಎಲ್ಲರೂ ಸೇರಿಕೊಂಡು ಮದ್ಯ ಸೇವಿಸಿದ್ದಾರೆ. ಈ ವೇಳೆ ಕುಡಿದ ಮತ್ತಿನಲ್ಲಿ ಸೈಯದ್ ನೌಶಾದ್ ಜೊತೆ ಇದ್ದವರು ಬ್ಲೇಡ್ ನಿಂದ ಕತ್ತು ಕೊಯ್ದು ಪರಾರಿಯಾಗಿದ್ದಾರೆ.
ಗಂಭೀರ ಗಾಯಗೊಂಡಿರುವ ಸೈಯದ್ ನೌಶಾದ್ ನನ್ನು ಸ್ಥಳೀಯರು ಆಸ್ಪತ್ರೆಗೆ ದಾಖಲಿಸಿದ್ದಾರೆ. ಈ ಕುರಿತು ಪ್ರಕರಣ ದಾಖಲಾಗಿದ್ದು, ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ.