ಬೆಂಗಳೂರು: ಕೊನೆಯ ಮೈಲಿ ಸಂಪರ್ಕವನ್ನು ಉತ್ತೇಜಿಸಲು ಬೆಂಗಳೂರಿನ 9 ಮೆಟ್ರೋ ನಿಲ್ದಾಣಗಳಲ್ಲಿ ಉಚಿತ ಸೈಕಲ್ ಪಾರ್ಕಿಂಗ್ ಸೌಲಭ್ಯ ಒದಗಿಸಲು ಬೆಂಗಳೂರು ಮೆಟ್ರೋ ರೈಲು ನಿಗಮ (BMRCL) ಮುಂದಾಗಿದೆ. ಸೈಕ್ಲಿಂಗ್ ಮೂಲಕ ಪ್ರಯಾಣಿಸಲು ಸಾರ್ವಜನಿಕರನ್ನು ಪ್ರೋತ್ಸಾಹಿಸುವ ಉದ್ದೇಶದಿಂದ, ನಿಗಮವು ಸೈಕಲ್ ಪಾರ್ಕಿಂಗ್ ವ್ಯವಸ್ಥೆಯನ್ನು ಬಲಪಡಿಸಲು ಟೆಂಡರ್ ಆಹ್ವಾನಿಸಿತ್ತು.
ಟೆಂಡರ್ ಸಲ್ಲಿಕೆ ಕೊನೆಯ ದಿನಾಂಕ ಫೆಬ್ರವರಿ 9 ಆಗಿದೆ. ಪ್ರಸ್ತುತ, ಮೆಟ್ರೋ ನಿಲ್ದಾಣಗಳಲ್ಲಿ ಸೈಕಲ್ ನಿಲುಗಡೆಗೆ ಗಂಟೆಗೆ 1 ರೂಪಾಯಿ ಮತ್ತು ದಿನಕ್ಕೆ ಗರಿಷ್ಠ 10 ರೂಪಾಯಿ ಶುಲ್ಕ ವಿಧಿಸಲಾಗಿದೆ.
ಪ್ರಯಾಣಿಕರು ಹೆಚ್ಚು ಬಳಕೆಯಾಗುವ ನಿಲ್ದಾಣಗಳನ್ನು ಗುರುತಿಸಿ ಉಚಿತ ಪಾರ್ಕಿಂಗ್ ವ್ಯವಸ್ಥೆಯನ್ನು ಜಾರಿಗೆ ತರಲು ನಿಗಮವು ಆಲೋಚನೆ ನಡೆಸುತ್ತಿದೆ. ಈ ಸೌಲಭ್ಯ ಪ್ರಾಥಮಿಕವಾಗಿ ಕೇವಲ ಒಂಬತ್ತು ನಿಲ್ದಾಣಗಳಿಗೆ ಮಾತ್ರ ಅನ್ವಯವಾಗುತ್ತದೆ. ಉಳಿದ ನಿಲ್ದಾಣಗಳಲ್ಲಿ ಪಾರ್ಕಿಂಗ್ ಶುಲ್ಕ ಯಥಾಸ್ಥಿತಿಯಂತೆ ಮುಂದುವರಿಯಲಿದೆ ಎಂದು ತಿಳಿಸಲಾಗಿದೆ.
ಯಾವೆಲ್ಲ ನಿಲ್ದಾಣಗಳು?
ನಮ್ಮ ಮೆಟ್ರೋದ ಮೂರು ಮಾರ್ಗಗಳ ಪ್ರಮುಖ ನಿಲ್ದಾಣಗಳಲ್ಲಿ ಉಚಿತ ಸೈಕಲ್ ಪಾರ್ಕಿಂಗ್ಗೆ
- ನೇರಳೆ ಮಾರ್ಗದ
ಮೈಸೂರು ರಸ್ತೆ,
ಬೈಯಪ್ಪನಹಳ್ಳಿ,
- ಹಸಿರು ಮಾರ್ಗದ
ಮಾದಾವರ,
ಪೀಣ್ಯ ಇಂಡಸ್ಟ್ರಿ,
ಜೆ.ಪಿ. ನಗರ
- ಹಳದಿ ಮಾರ್ಗದ
ಬಿಟಿಎಂ ಲೇಔಟ್,
ಎಲೆಕ್ಟ್ರಾನಿಕ್ಸ್ ಸಿಟಿ,
ರಾಗಿಗುಡ್ಡ
ಜಯದೇವ ಆಸ್ಪತ್ರೆ
ಇದನ್ನೂ ಓದಿ : ಹಿನ್ನೆಲೆ ಗಾಯನಕ್ಕೆ ದಿಢೀರ್ ನಿವೃತ್ತಿ ಘೋಷಿಸಿದ ಖ್ಯಾತ ಗಾಯಕ ಅರಿಜಿತ್ ಸಿಂಗ್.. ಕೋಟ್ಯಂತರ ಅಭಿಮಾನಿಗಳಿಗೆ ಶಾಕ್!



















