ಬೆಂಗಳೂರು: ಕರ್ನಾಟಕ ರತ್ನ, ದಿವಂಗತ ಪುನೀತ್ ರಾಜಕುಮಾರ್ ಅವರ 50ನೇ ಹುಟ್ಟು ಹಬ್ಬದ ಅಂಗವಾಗಿ ಹಾಗೂ ಭಾರತ ತಂಡ ಐಸಿಸಿ ಚಾಂಪಿಯನ್ಸ್ ಟ್ರೋಫಿ ಗೆದ್ದ ಹಿನ್ನೆಲೆಯಲ್ಲಿ ಪುನೀತ್ ಅಭಿಮಾನಿಯೊಬ್ಬರು ಉಚಿತ ಚಾಟ್ಸ್ ವಿತರಿಸುವುದಾಗಿ ಘೋಷಿಸಿದ್ದಾರೆ.
ಮಹಾಲಕ್ಷ್ಮೀ ಲೇಔಟ್ ನಲ್ಲಿರುವ ಅನಿಲ್ ಚಾಟ್ಸ್ ಸೆಂಟರ್ ನಿಂದ ಮಾರ್ಚ್ 17ಕ್ಕೆ ಪುನೀತ್ ರಾಜಕುಮಾರ್ ಹುಟ್ಟು ಹಬ್ಬದ ಹಿನ್ನೆಲೆಯಲ್ಲಿ ಉಚಿತ ಪಾನಿಪುರಿ, ಬೇಲ್ ಪುರಿ, ಸೇವ್ ಪುರಿ ನೀಡಲಾಗುತ್ತಿದೆ. ಅಂದು ಸಂಜೆ 5ರಿಂದ ಉಚಿತ ಚಾಟ್ಸ್ ನೀಡಲಾಗುವುದು ಎಂದು ಬ್ಯಾನರ್ ಹಾಕಿದ್ದಾರೆ.