ಬೆಂಗಳೂರು: ದೇಶದಲ್ಲಿ ಪ್ರತಿಯೊಬ್ಬರಿಗೂ ಕಾನೂನು ಗೊತ್ತಿರುವುದಿಲ್ಲ ಅದರಲ್ಲೂ, ಆಸ್ತಿ ವ್ಯಾಜ್ಯಗಳು, ವಿಚ್ಛೇದನ ಸೇರಿ ಹಲವು ಕಾನೂನುಗಳು, ನಿಯಮಗಳ ಬಗ್ಗೆ ಅರಿವು ಇರುವುದಿಲ್ಲ. ತಿಳಿಯಬೇಕು ಎಂದರೆ ಸಾವಿರಾರು ರೂಪಾಯಿ ಚಾರ್ಜ್ ಮಾಡುವ ವಕೀಲರ ಬಳಿ ಹೋಗಬೇಕು. ಆದರೆ, ಇಂತಹ ತಾಪತ್ರಯವನ್ನು ತಪ್ಪಿಸಲು ಕೇಂದ್ರ ಸರ್ಕಾರ ಮುಂದಾಗಿದೆ.
ಹೌದು, ಕೇಂದ್ರ ಸರ್ಕಾರವು ಸಾರ್ವಜನಿಕರಿಗೆ ಕಾನೂನು ನೆರವು ಒದಗಿಸುವ ದಿಸೆಯಲ್ಲಿ ವಾಟ್ಸ್ ಆ್ಯಪ್ ನಲ್ಲಿ ನ್ಯಾಯ ಸೇತು (Nyaya Setu) ಎಂಬ ಚಾಟ್ ಬಾಟ್ ಆರಂಭಿಸಿದೆ. ಇದರ ಕಾನೂನು ಸಲಹೆ, ನೆರವು ಮತ್ತು ಸಮಾಲೋಚನೆಗಳನ್ನು ಪಡೆಯಬಹುದು. ಯಾವುದಾದರೂ ಕೇಸ್ ಗಳು ಇದ್ದಲ್ಲಿ ಅದಕ್ಕೆ ಸಂಬಂಧಿಸಿದ ಕಾನೂನುಗಳು ಏನಿವೆ ಎಂಬ ಮಾಹಿತಿ ತಿಳಿಯಬಹುದು.
ಅಷ್ಟೇ ಅಲ್ಲ, ಯಾವುದಾದರೂ ಪ್ರಕರಣ ಿದ್ದರೆ, ಅದಕ್ಕೆ ಸಂಬಂಧಿಸಿದಂತೆ ನಿಮಗೆ ಯಾವ್ಯಾವ ಕಾನೂನು ಅವಕಾಶಗಳು, ಮಾರ್ಗಗಳು ಇವೆ ಎನ್ನುವ ಸಮಾಲೋಚನೆಗಳನ್ನು ಪಡೆಯಬಹುದು. ಇದು ಸಂಪೂರ್ಣವಾಗಿ ಉಚಿತ ಸೇವೆಯಾಗಿದ್ದು, ಯಾರು ಬೇಕಾದರೂ ನೆರವು ಪಡೆಯಬಹುದು.
ಇದನ್ನು ಬಳಸೋದು ಹೇಗೆ?
ಜನರು ಮೊದಲು ತಮ್ಮ ವಾಟ್ಸ್ ಆ್ಯಪ್ ನಲ್ಲಿ 7217711814 ಸಂಖ್ಯೆಯನ್ನು ಸೇವ್ ಮಾಡಿಕೊಳ್ಳಿ. ಬಳಿಕ ಈ ಚಾಟ್ಬಾಟ್ ಬಳಸಲು ಪ್ರಾರಂಭಿಸಬಹುದು. Tele-Law ಎಂಬ ಆಯ್ಕೆ ನಿಮಗೆ ಕಾಣಿಸಿಕೊಳ್ಳುತ್ತದೆ. ಮೊಬೈಲ್ ಸಂಖ್ಯೆಯ ಧೃಢೀಕರಣದ ನಂತರ ಎಐ ತಂತ್ರಜ್ಞಾನ ಆಧಾರಿತ ನ್ಯಾಯ ಸೇತು ಚಾಟ್ ಬಾಟ್ ಮೂಲಕ ಕಾನೂನು ಸಲಹೆ ಮತ್ತು ಮಾಹಿತಿ ಪಡೆಯಬಹುದು. ಕೇಂದ್ರ ಸರ್ಕಾರವು ಇದನ್ನು 2026ರ ಜನವರಿ 1ರಿಂದ ಜಾರಿಗೊಳಿಸಿದೆ.
ಇದನ್ನೂ ಓದಿ: ಬೆಂಗಳೂರಿನಲ್ಲಿರುವ IIScಯಲ್ಲಿ ಎಂಜಿನಿಯರ್ ಹುದ್ದೆಗಳ ನೇಮಕಾತಿ | ಹೀಗೆ ಅರ್ಜಿ ಸಲ್ಲಿಸಿ



















