ಬೆಂಗಳೂರು | ವಿಶ್ವ ಆರೋಗ್ಯ ದಿನದ ಪ್ರಯುಕ್ತವಾಗಿ ಮಲ್ಲೇಶ್ವರದ ಮತ್ತಿಕೆರೆಯ ನಗರ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಸಾರ್ವಜನಿಕರ ಆರೋಗ್ಯದ ಹಿತದೃಷ್ಟಿಯಿಂದ ಮಹತ್ವದ ಕಾರ್ಯಕ್ರಮವನ್ನು ಇಂದು ಬಿಜೆಪಿ ಶಾಸಕ ಡಾ. ಸಿ.ಎನ್ ಅಶ್ವಥ್ ನಾರಾಯಣ್ ಅವರು ಯಶಸ್ವಿಯಾಗಿ ಉದ್ಘಾಟಿಸಿದರು.

ಈ ಕಾರ್ಯಕ್ರಮದಡಿ ರಕ್ತದ ಒತ್ತಡ (BP), ಶುಗರ್ (Sugar), ಕಿಡ್ನಿ, ಹೃದಯ, ಯಕೃತ್ (Liver), ಮೂತ್ರ (Urine) ಸೇರಿದಂತೆ ವಿವಿಧ ಆರೋಗ್ಯ ಪರೀಕ್ಷೆಗಳು ಹಾಗೂ ಅಗತ್ಯ ಔಷಧಿಗಳನ್ನು ಯಾವುದೇ ಕೊರತೆಯಿಲ್ಲದೆ ಪ್ರತಿದಿನ ಸಂಪೂರ್ಣ ಉಚಿತವಾಗಿ ವಿತರಿಸಲಾಗುತ್ತದೆ ಎಂದು ಶಾಸಕರು ತಮ್ಮ ಅಧಿಕೃತ ಸಾಮಾಜಿಕ ಜಾಲತಾಣ ಖಾತೆಯಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ.

ಉಚಿತ ಆರೋಗ್ಯ ಪರೀಕ್ಷೆಗಳು :
- ರಕ್ತದ ಒತ್ತಡ ಪರೀಕ್ಷೆ (BP)
- ರಕ್ತದ ಸಕ್ಕರೆ ಪರೀಕ್ಷೆ (Sugar)
- ಕಿಡ್ನಿ ಪರೀಕ್ಷೆ (Kidney)
- ಹೃದಯ ತಪಾಸಣೆ (Heart)
- ಯಕೃತ್ತಿನ ಪರೀಕ್ಷೆ (Liver)
- ಮೂತ್ರಪಿಂಡ ಪರೀಕ್ಷೆ (Urine)
- ಎಕ್ಸ-ರೇ (X-ray)

ಇದನ್ನೂ ಓದಿ : ಅಸ್ಸಾಂ ಸಿಎಂ ಪತ್ನಿ ವಿರುದ್ಧ ಪಾಸ್‌ಪೋರ್ಟ್ ಆರೋಪ – ಕಾಂಗ್ರೆಸ್ ನಾಯಕ ಪವನ್ ಖೇರಾ ನಿವಾಸಕ್ಕೆ ಪೊಲೀಸರ ಲಗ್ಗೆ!


















