ಚಿತ್ರದುರ್ಗ: ಚಿತ್ರದುರ್ಗದಲ್ಲಿ ಜುಲೈ 21ರಿಂದ ರುಡ್ ಸೆಟ್ ಸಂಸ್ಥೆಯಿಂದ ತರಬೇತಿಗೆ ಅರ್ಜಿ ಆಹ್ವಾನಿಸಲಾಗಿದೆ.

ಅಲ್ಲದೇ, ಸಂಸ್ಥೆಯಿಂದ ತರಬೇತಿ ನಡೆಯಲಿದೆ. ತರಬೇತಿಯಲ್ಲಿ ವಿವಿಧ ರೀತಿಯ ಮೊನೋಬ್ಲಾಕ್, ಸಬ್ ಮರ್ಸಿಬಲ್ ಮೋಟಾರ್ ರೀವೈಂಡಿಂಗ್ ದುರಸ್ತಿ, ಪಂಪ್ ಸೆಟ್ ದುರಸ್ತಿ, ಗೃಹೋಪಯೋಗಿ ವಸ್ತುಗಳಾದ ಮಿಕ್ಸಿ, ಫ್ಯಾನ್ ಮುಂತಾದ ಎಲೆಕ್ಟ್ರಿಕ್ ಉಪಕರಣಗಳ ದುರಸ್ತಿ ಬಗ್ಗೆ ಪ್ರಾಯೋಗಿಕವಾಗಿ ತಿಳಿಸಿಕೊಡಲಾಗುವುದು. ಇದರೊಟ್ಟಿಗೆ ಉದ್ಯಮಶೀಲತಾ ಅಭಿವೃದ್ದಿಯ ಕುರಿತು ನುರಿತ ಉಪನ್ಯಾಸಕರಿಂದ ತರಬೇತಿ ನೀಡಲಾಗುತ್ತದೆ. ತರಬೇತಿಯ ನಂತರ ಸ್ವ ಉದ್ಯೋಗ ಪ್ರಾರಂಭಿಸಲು ಮಾರ್ಗದರ್ಶನ, ಸಹಕಾರ ಮತ್ತು ಬ್ಯಾಂಕ್ ಲೋನ್ ತೆಗೆದುಕೊಳ್ಳುವ ಬಗ್ಗೆ ಮಾರ್ಗದರ್ಶನ ನೀಡಲಾಗುವುದು.

ಊಟ, ವಸತಿಯೊಂದಿಗೆ ಸಂಪೂರ್ಣ ಉಚಿತ ತರಬೇತಿ ನೀಡಲಿದ್ದು, ಗ್ರಾಮೀಣ ಪ್ರದೇಶದ ಬಿಪಿಎಲ್ ರೇಶನ್ ಕಾರ್ಡ್ ಹೊಂದಿರುವ ಅಭ್ಯರ್ಥಿಗಳಿಗೆ ಮೊದಲ ಪ್ರಾಶಸ್ತ್ಯ ನೀಡಲಾಗುವುದು. ಆಸಕ್ತರು ಕೂಡಲೇ ಕರೆ ಮಾಡಿ ಅರ್ಜಿಯನ್ನು ಸಲ್ಲಿಸಬಹುದಾಗಿದೆ. ತರಬೇತಿಯ ಸಂದರ್ಶನ ಜುಲೈ 15ಕ್ಕೆ ನಡೆಯಲಿದೆ. ಸಂದರ್ಶನದಲ್ಲಿ ಭಾಗಿಯಾಗಲು ಬಿಪಿಎಲ್ ರೇಶನ್ ಕಾರ್ಡ್, ಆಧಾರ್ ಕಾರ್ಡ್, ಬ್ಯಾಂಕಿನ ಪಾಸ್ ಪುಸ್ತಕದ ನಕಲುಗಳು ಹಾಗೂ ಒಂದು ಪೋಟೋವನ್ನು ತರಬೇಕಾಗುತ್ತದೆ. ಜುಲೈ 21ರಿಂದ ತರಬೇತಿ ಆರಂಭವಾಗಲಿದೆ. ಆಸಕ್ತರು ಹೆಚ್ಚಿನ ಮಾಹಿತಿಗಾಗಿ ದೂ.ಸಂಖ್ಯೆ: 9481778047, 8618282445 9019299901, 8660627785 ಗೆ ಸಂಪರ್ಕಿಸುವಂತೆ ಪ್ರಕಟಣೆ ತಿಳಿಸಿದೆ.


















