ಬೆಂಗಳೂರು: ಹೃದಯ ಸಂಬಂಧಿ ಕಾಯಿಲೆ ಇರುವ ಮಕ್ಕಳಿಗಾಗಿ(childrens) ಮಂಗಳೂರಿನಲ್ಲಿ ವಿಶೇಷ ಉಚಿತ ವಿಶೇಷ ಶಿಬಿರವು ಕೊಚ್ಚಿಯ ಅಮೃತ ಆಸ್ಪತ್ರೆ ವತಿಯಿಂದ ಜ. 19ರಂದು ಭಾನುವಾರ ಬೆಳಗ್ಗೆ 9 ರಿಂದ ನಡೆಯಲಿದೆ. ಬೋಳೂರಿನ ಮಾತಾ ಅಮೃತಾನಂದಮಯಿ(Mata Amritanandamayi)ಮಠದ ಅಮೃತ ವಿದ್ಯಾಲಯದಲ್ಲಿ ಈ ವಿಶೇಷ ಶಿಬಿರ ನಡೆಯಲಿದೆ. ಕೊಚ್ಚಿಯ ಅಮೃತ ಆಸ್ಪತ್ರೆಯ ತಜ್ಞರು ಶಿಬಿರದಲ್ಲಿ ಭಾಗವಹಿಸಲಿದ್ದಾರೆ. ಜನ್ಮಜಾತ ಮತ್ತು ಇತರ ಹೃದಯ ಸಮಸ್ಯೆಗಳಿಗೆ ಸಮಗ್ರ ತಪಾಸಣೆ ನಡೆಸಲಾಗುತ್ತಿದೆ. ಹೆಚ್ಚಿನ ಆರೈಕೆಯ ಅಗತ್ಯವಿರುವ ಮಕ್ಕಳು ಕೊಚ್ಚಿಯ ಅಮೃತ ಆಸ್ಪತ್ರೆಯಲ್ಲಿ(hospital) ಉಚಿತ ಚಿಕಿತ್ಸೆಗಳು ಮತ್ತು ಶಸ್ತ್ರಚಿಕಿತ್ಸೆಗಳಿಗೆ ಅರ್ಹರಾಗಿರುತ್ತಾರೆ.
ಶಿಬಿರದಲ್ಲಿ ಭಾಗವಹಿಸಲು ಪೂರ್ವ ನೋಂದಣಿ ಕಡ್ಡಾಯವಾಗಿದೆ. ನೋಂದಣಿಗಾಗಿ ಡಾ. ದೇವಿಪ್ರಸಾದ್ ಎಸ್. ಹೆಜಮಾಡಿ: 9845761845 ಮಾತಾ ಅಮೃತಾನಂದಮಯಿ ಮಠ: ಮೊ.ನಂ 8951470744 ಗೆ ಕರೆ ಮಾಡಿ ಸಂಪರ್ಕಿಸಬೇಕೆಂದು ಪ್ರಕಟಣೆ ತಿಳಿಸಿದೆ.