ಚಿತ್ರದುರ್ಗ: ನಗರದಲ್ಲಿ ರುಡ್ ಸೆಟ್ ಸಂಸ್ಥೆ ವತಿಯಿಂದ ಫೆ. 3ರಂದು ಮಹಿಳೆಯರಿಗಾಗಿ ಒಂದು ತಿಂಗಳ ಉಚಿತ ಬ್ಯೂಟಿಷಿಯನ್ ತರಬೇತಿ ಹಮ್ಮಿಕೊಳ್ಳಲಾಗಿದೆ.
18 ರಿಂದ 45 ರ ವಯೋಮಿತಿಯ ಆಸಕ್ತ ಮಹಿಳಾ ಅಭ್ಯರ್ಥಿಗಳು ತರಬೇತಿಗೆ ನೇರವಾಗಿ ಹಾಜರಾಗಬಹುದು. ಕೆಲವೇ ಅಭ್ಯರ್ಥಿಗಳಿಗೆ ಮಾತ್ರ ಅವಕಾಶ ಇದೆ. ಗ್ರಾಮೀಣ ಪ್ರದೇಶದ ಬಿಪಿಎಲ್ ರೇಶನ್ ಕಾರ್ಡ್ ಹೊಂದಿರುವ ಅಭ್ಯರ್ಥಿಗಳು ಆಧಾರ್ ಕಾರ್ಡ್, ರೇಶನ್ ಕಾರ್ಡ್, ಬ್ಯಾಂಕ್ ಪಾಸ್ ಪುಸ್ತಕದ ನಕಲುಗಳೊಂದಿಗೆ ತಮ್ಮ ಇತ್ತೀಚಿನ 3 ಪಾಸ್ ಪೋರ್ಟ್ ಸೈಜಿನ ಪೋಟೋಗಳೊಂದಿಗೆ ಹಾಜರಾಗಬೇಕು. ವಸತಿ ವ್ಯವಸ್ಥೆಯನ್ನು ಮಾಡಿರಲಾಗುತ್ತದೆ.
ಫೆ. 3ರಂದು ಬೆಳಗ್ಗೆ 9.30ರ ಒಳಗೆ ಹಾಜರಾಗಬೇಕು. ಹೆಚ್ಚಿನ ಮಾಹಿತಿಗಾಗಿ ಮೊ. 948177 8047, 8618 282445, 9449732805, 9019299901, 8548855757ಗೆ ಸಂಪರ್ಕಿಸಲು ಪ್ರಕಟಣೆ ಕೋರಿದೆ.