ವಿಜಯನಗರ: ಸರ್ಕಾರಿ ಕೆಲಸ ಕೊಡಿಸುವುದಾಗಿ ಕೋಟಿ ಕೋಟಿ ರೂ. ವಂಚಿಸಿರುವ ಘಟನೆಯೊಂದು ಕೇಳಿ ಬಂದಿದೆ.
ಸರ್ಕಾರಿ ಕೆಲಸ ಮತ್ತು ಸರ್ಕಾರದಿಂದ ಲೋನ್ ಕೊಡಿಸುವುದಾಗಿ ವ್ಯಕ್ತಿಯೋರ್ವ ವಂಚಿಸಿದ್ದಾನೆ. ನಿಗಮ ಮಂಡಳಿಗಳಲ್ಲಿ ವೈಯಕ್ತಿಕ ಲೋನ್, ಕುರಿ ಲೋನ್ ಕೊಡಿಸುವುದಾಗಿ ಜನರನ್ನು ನಂಬಿಸಿ ವಂಚಿಸಿದ್ದಾನೆ. ಚಿತ್ರದುರ್ಗ ಮೂಲದ ಕುಮಾರ್ ಸ್ವಾಮಿ ವಂಚಿಸಿದ ವ್ಯಕ್ತಿ ಎನ್ನಲಾಗಿದೆ.
ಕಳೆದ ಬಿಜೆಪಿ ಅವಧಿಯಲ್ಲಿನ ಮುಖ್ಯಮಂತ್ರಿ ಸಚಿವಾಲಯದ ಲೆಟರ್ ಪ್ಯಾಡ್ ಬಳಕೆ ಮಾಡಿಕೊಂಡು ಅಂದಿನ ಸರ್ಕಾರದ ಅಧೀನ ಕಾರ್ಯದರ್ಶಿಗಳ ನಕಲಿ ಸಹಿ ಮಾಡಿ ವಂಚಿಸಿದ್ದಾನೆ ಎನ್ನಲಾಗಿದೆ.
ನಿಮ್ಮ ಲೋನ್ ಅಪ್ರೂವಲ್ ಆಗಿದೆ ಎಂದು ಸರ್ಕಾರದ ಅಧೀನ ಕಾರ್ಯದರ್ಶಿಗಳ ನಕಲಿ ಸಹಿ ಮಾಡಿ ವಂಚಿಸಿದ್ದಾನೆ. ವಿಜಯನಗರ ಜಿಲ್ಲೆ ಒಂದರಲ್ಲೇ 200ಕ್ಕೂ ಅಧಿಕ ಜನರನ್ನು ವಂಚಿಸಿದ್ದಾನೆ. ಸದ್ಯ ಮೋಸಕ್ಕೊಳಗಾದ ಜನರು ಈಗ ನ್ಯಾಯದ ಮೊರೆ ಹೋಗಿದ್ದಾರೆ. ನಾವು ಕೊಟ್ಟ ಹಣ ಹಿಂತಿರುಗಿ ಕೊಟ್ಟರೆ ಸಾಕು ಅಂತ ಗೋಳಾಡುತ್ತಿದ್ದಾರೆ. ಕೊಟ್ಟೂರು ಪೊಲೀಸ್ ಠಾಣೆಯಲ್ಲಿ ಈ ಕುರಿತು ಪ್ರಕರಣ ದಾಖಲಾಗಿದೆ.