ಬೆಂಗಳೂರು: ನಾನು ಪ್ರಧಾನಿ ಕಚೇರಿಯಲ್ಲಿ ಕೆಲಸ ಮಾಡುವ ಅಧಿಕಾರಿ ಹಾಗೂ ಅಮಿತಾ ಶಾ ಅವರ ದತ್ತು ಪುತ್ರ ಎಂದುಕೊಂಡು ಹಲವರನ್ನು ವಂಚಿಸುತ್ತಿದ್ದ ವ್ಯಕ್ತಿ ಇದೀಗಾ ಪೊಲೀಸರ ಅತಿಥಿಯಾಗಿದ್ದಾನೆ.
ವಿಜಯನಗರದ ನಿವಾಸಿ ಸುಜಯ್ @ ಸುಜಯೇಂದ್ರ ಬಂಧಿತ ಆರೋಪಿ. ಏನು ಕೆಲಸವೂ ಇಲ್ಲದ ಸುಜಯೇಂದ್ರ ಎಲ್ಲರ ಬಳಿಯೂ ಕೇಂದ್ರ ಸರ್ಕಾರದ ಹತ್ತಿರ ವ್ಯಕ್ತಿಎಂದು ಪರಿಚಯ ಮಾಡಿಕೊಂಡು, ಜಮ್ಮು ಕಾಶ್ಮೀರದ ವೈದ್ಯರ ಬಳಿಯಲ್ಲಿ ದೇವನಹಳ್ಳಿಯಲ್ಲಿ ವಿಲ್ಲಾ ರೀತಿಯಲ್ಲಿ ಆಯುರ್ವೇದಾ ಹಾಸ್ಪಿಟಲ್ ತೆರಯಲು ಅವಕಾಶ ಮಾಡಿಕೊಡುತ್ತೀನಿ ಎಂದು ನಂಬಿಸಿ 2.7 ಕೋಟಿ ಹಣವನ್ನು ವಸೂಲಿ ಮಾಡಿ ವಂಚನೆ ಮಾಡಿದ್ದಾನೆ. ಈತ ಒಮ್ಮೆ ಉಪಮುಖ್ಯಮಂತ್ರಿಗಳ ಜೊತೆ ವೇದಿಕೆಯನ್ನು ಹಂಚಿಕೊಂಡಿದ್ದಾನೆ ಎಂದು ತಿಳಿದು ಬಂದಿದೆ.

ಈ ಸಂಬಂಧ ಪ್ರಕರಣ ದಾಖಲು ಮಾಡಿಕೊಂಡ ವಿಜಯನಗರ ಪೊಲೀಸರು ಸುಜಯೇಂದ್ರನನ್ನು ಬಂಧಸಿದ್ದಾರೆ. ತನಿಖೆ ವೇಳೆ ಆತನ ಅಸಲಿಯತ್ತು ಅನಾವರಣವಾಗಿದ್ದು, ಸುಜಯೇಂದ್ರ ಈಗಾಗಲೇ ಎರಡು ಬಾರಿ ಜೈಲಿಗೆ ಹೋಗಿದ್ದ. ಅಲ್ಲದೇ, 4 ಚೆಕ್ ಬೌನ್ಸ್ ಕೇಸ್‌ಗಳು ಆತನ ವಿರುದ್ದ ದಾಖಲಾಗಿವೆ ಎಂಬುವುದು ಬಯಲಾಗಿದೆ.
ಇದನ್ನೂ ಓದಿ: 7.11 ಕೋಟಿ ದರೋಡೆಯ ಮಾಸ್ಟರ್ ಮೈಂಡ್ ಕಾನ್ಸ್ಟೇಬಲ್ ಅಣ್ಣಪ್ಪ ನಾಯ್ಕ್ ಅಮಾನತು



















