ಬೆಂಗಳೂರು : ಮಾಲೀಕನ ಹೆಸರಲ್ಲಿ ಚಿನ್ನದ ಸರಗಳನ್ನು ಪಡೆದು ವಂಚನೆ ಮಾಡಿದ್ದ ವ್ಯಕ್ತಿಯನ್ನು5 ತಿಂಗಳ ಬಳಿಕ ಭಾರತಿನಗರ ಪೊಲೀಸರು ಬಂಧಿಸಿದ್ದಾರೆ. ರಾಜಸ್ಥಾನ ಮೂಲದ ಧರ್ಮವೀರ್ ಸಿಂಗ್ ಬಂಧಿತ ಆರೋಪಿ.
ಮಹಾವೀರ್ ಜ್ಯುವೆಲ್ಲರಿ ಶಾಪ್‌ನಲ್ಲಿ ಕೆಲಸ ಮಾಡುತ್ತಿದ್ದ ಎಂದು ತಿಳಿದು ಬಂದಿದೆ. ಈ ವೇಳೆ ಮಾಲೀಕ ಬೇರೆ ಚಿನ್ನದ ಅಂಗಡಿಗಳ ಜತೆ ಕೊಡುಕೊಳ್ಳುವಿಕೆ ಮಾಡುತ್ತಿದ್ದ. ಆಭರಣ ಎಕ್ಸ್‌ಚೇಂಜ್ ಮಾಡುವುದನ್ನ ತಿಳಿದಿದ್ದ ಆರೋಪಿ, ಜ್ಯುವೆಲ್ಲರಿ ಮಾಲೀಕ ಹೈದರಾಬಾದ್ ಹೋಗಿದ್ದ ವೇಳೆ ಮಾಲೀಕನ ಹೆಸರು ಹೇಳಿ ಬೇರೆ ಚಿನ್ನದ ಅಂಗಡಿಯಿಂದ 7 ಲಾಂಗ್ ಚೈನ್ ಪಡೆಡುಕೊಂಡಿದ್ದ. ಬಳಿಕ ಆರೋಪಿ 7 ಲಾಂಗ್ ಚೈನ್ ಸಮೇತ ರಾಜಸ್ಥಾನಕ್ಕೆ ಎಸ್ಕೇಪ್ ಆಗಿದ್ದಾನೆ.
ಪೊಲೀಸರ ಕಣ್ತಪ್ಪಿಸಿ ಐದು ತಿಂಗಳು ತಲೆಮರೆಸಿಕೊಂಡಿದ್ದ ಆರೋಪಿ ಧರ್ಮವೀರ್ ಸಿಂಗ್‌ನನ್ನು ಕೊನೆಗೂ ಪೊಲೀಸರು ಬಂಧಿಸಿದ್ದಾರೆ. ಸದ್ಯ ಬಂಧಿತ ಆರೋಪಿಯಿಂದ ಸುಮಾರು 33 ಲಕ್ಷ ರೂ ಮೌಲ್ಯದ 239 ಗ್ರಾಂ ಚಿನ್ನದ ಸರಗಳು ವಶಕ್ಕೆ ಪಡೆಯಲಾಗಿದೆ.
ಇದನ್ನೂ ಓದಿ : ‘ವೀರ ಕಂಬಳ’ಕ್ಕೆ ಸಿಎಂ ಶುಭಾಶಯ..!



















