ಮೈಸೂರು : ನಕಲಿ ಸೀಲು ಬಳಸಿ ಪುರಸಭೆಗೆ ಕೋಟ್ಯಾಂತರ ರೂ. ವಂಚನೆ ಮಾಡಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಟಿ.ನರಸೀಪುರ ಪುರಸಭಾ ಸದಸ್ಯನ ವಿರುದ್ಧ ಎಫ್ ಐ ಆರ್ ದಾಖಲಾಗಿದೆ.
ಪುರಸಭಾ ಮಾಜಿ ಅಧ್ಯಕ್ಷ, ಹಾಲಿ ಸದಸ್ಯ ಟಿ.ಎಂ. ನಂಜುಂಡಸ್ವಾಮಿ ನಕಲಿ ಸೀಲು ಬಳಸಿ ವಂಚಿಸಿದ್ದಾರೆಂದು ಪುರಸಭೆ ಮುಖ್ಯಾಧಿಕಾರಿ ಬಿ.ಕೆ.ವಸಂತಕುಮಾರಿ ದೂರು ದಾಖಲಿಸಿದ್ದರು.
ಕೆನರಾ ಬ್ಯಾಂಕ್‌ನ ಚೆಕ್, ಚಲನ್ ಗಳನ್ನ ನಕಲು ಮಾಡಿ ವಂಚಿಸಿರುವುದಾಗಿಯೂ, ಜನರ ಬಳಿ ಟ್ಯಾಕ್ಸ್ ಹಣ ಕಟ್ಟಿಸಿಕೊಳ್ಳಲು ನಕಲಿ ರಶೀದಿ ಬಳಕೆ ಮಾಡಿರುವ ಆರೋಪದ ಮೇಲೆ ಟಿ.ಎಂ. ನಂಜುಂಡಸ್ವಾಮಿ ವಿರುದ್ಧ ಬಿಎನ್ ಎಸ್ 336(2), 338,341(1), 318(2),318(4), ರೆವಿ 3/4 ಅಡಿ ದೂರು ದಾಖಲಾಗಿದೆ.
ಇನ್ನು, ನಕಲಿ ರಶೀದಿ ಕೊಟ್ಟಿರುವ 10 ಕ್ಕೂ ಹೆಚ್ಚು ಮಂದಿಯ ವಿರುದ್ಧವೂ ಎಫ್‌ಐ ಆರ್ ದಾಖಲಾಗಿದೆ.
ಟಿ.ಎಂ ನಂಜುಂಡಸ್ವಾಮಿ ಸಿಎಂ ಸಿದ್ದರಾಮಯ್ಯ ಹಾಗು ಪುತ್ರ ಯತೀಂದ್ರ ಸಿದ್ದರಾಮಯ್ಯ ಅವರ ಪರಮಾಪ್ತರು ಎಂದು ಹೇಳಲಾಗುತ್ತಿದೆ.