ಬೆಂಗಳೂರು : ಸೋಷಿಯಲ್ ಮೀಡಿಯಾದಲ್ಲಿ ಪರಿಚಯವಾದ ಪ್ರೇಯಸಿಗೆ ಬ್ರೈನ್ ಟ್ಯೂಮರ್ ಎಂದು ಸುಳ್ಳು ಹೇಳಿದ ಪ್ರಿಯಕರ ಸಿಂಪಥಿ ಕ್ರಿಯೇಟ್ ಮಾಡಿ ಲಕ್ಷಾಂತರ ರೂಪಾಯಿ ವಂಚನೆ ಮಾಡಿರುವ ಘಟನೆ ಬೆಂಗಳೂರಿನಲ್ಲಿ ಬೆಳಕಿಗೆ ಬಂದಿದೆ.
ಸೌಮ್ಯ ವಂಚನೆಗೆ ಒಳಗಾದ ಯುವತಿ, ಯೂಪಿ ಮೂಲದ ಸುಮೀತ್ ಸಿನ್ಹಾ ಬ್ರೈನ್ ಟ್ಯೂಮರ್ ಎಂದು ಸುಳ್ಳು ಹೇಳಿ ವಂಚಿಸಿದ ಯುವಕ
ಸೋಷಿಯಲ್ ಮೀಡಿಯಾದಲ್ಲಿ ಪರಿಚಯವಾಗಿದ್ದ ಇಬ್ಬರ ಸ್ನೇಹ ಪ್ರೀತಿಯಾಗಿ ಗಟ್ಟಿಯಾದ ಬಳಿಕ ತನಗೆ ಬ್ರೇನ್ ಟ್ಯೂಮರ್ ಇದೆ ಎಂದು ಅದು ಕ್ಯಾನ್ಸರ್ ಆಗಿದೆ ಎಂದು ಯುವಕ ಸುಳ್ಳು ಹೇಳಿದ್ದ.
ಪ್ರಿಯತಮನ ಕಷ್ಟಕ್ಕೆ ಮರುಗಿ 5 ಲಕ್ಷ ಹಣ ನೀಡಿದ್ದಳು. ಬ್ರೇನ್ ಟ್ಯೂಮರ್ ಸರಿ ಮಾಡಿಸಿ ಮದ್ವೆಯಾಗಲು ನಿರ್ಧರಿಸಿದ್ದ ಗೆಳತಿ ಹಂತ ಹಂತವಾಗಿ 5 ಲಕ್ಷದ 28 ಸಾವಿರ ಹಣ ನೀಡಿದ್ದಳು.
ಅಸಲಿ ಸಂಗತಿ ತಿಳಿದ ಬಳಿಕ ಶಾಕ್ ಆದ ಯುವತಿ ಈ ಬಗ್ಗೆ ಪ್ರಶ್ನೆ ಮಾಡಿದಕ್ಕೆ ಹಳೆ ಲವರ್ ಕಥೆ ಹೇಳಿದ್ದಾನೆ. ಆಕೆ ಹಣ ಕೇಳ್ತಿದ್ಲು ಅದ್ಕೆ ಸುಳ್ಳು ಹೇಳಿ ಹಣ ಪಡೆದೆ ಎಂದು ಸಬೂಬು ನೀಡಿದ್ದಾನೆ.
ಬಳಿಕ ಇದರಿಂದ ದೂರವಿರಲು ದೂರುದಾರೆ ಸೌಮ್ಯ ನಿರ್ದರಿಸಿದಾಗ ಮುಂದಾದಾಗ ಧಮ್ಕಿ ಹಾಕಿರುವ ಸುಮೀತ್ Favorite person raat bhi bana dega ಎಂದು ಯುವತಿ ಫೋಟೋದೊಂದಿಗೆ ಸ್ಟೇಟಸ್‌ಗೆ ಹಾಕಿ ಬೆದರಿಕೆ ಹಾಕಿದ್ದಾನೆ. ಇದರಿಂದ ಮನನೊಂದ ಯುವತಿ ಪುಟ್ಟೇನಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾಳೆ. ಸದ್ಯ ದೂರು ದಾಖಲಿಸಿಕೊಂಡ ಪುಟ್ಟೇನಹಳ್ಳಿ ಪೊಲೀಸರು ಈ ಸಂಬಂಧ ತನಿಖೆ ಕೈಗೊಂಡಿದ್ದಾರೆ.
ಇದನ್ನೂ ಓದಿ : ಟಿ20 ವಿಶ್ವಕಪ್ ವೇಳೆ ಬಾಬರ್ ಆಜಂ ಹಾಗೂ ಫಖರ್ ಜಮಾನ್ ಅನ್‌ಫಿಟ್?



















