ಬೆಂಗಳೂರು: ನ್ಯಾಯಾಂಗದಲ್ಲಿ ಕೆಲಸ ಕೊಡಿಸುವ ವಾದದೊಂದಿಗೆ ವಂಚನೆ ಮಾಡಿದ ಆರೋಪದಲ್ಲಿ ಜೈಸನ್ ಮತ್ತು ಲೆವಿನಾ ದಂಪತಿ ಬಂಧಿತರಾಗಿದ್ದಾರೆ. ಇದೀಗ ಸಿಸಿಬಿ ಪೊಲೀಸರು ಅವರ ಪುರಾಣ ಬಯಲು ಮಾಡಿದ್ದಾರೆ.
ಸಿಸಿಬಿ ಪೊಲೀಸರು ನಡೆಸಿದ ತನಿಖೆಯಲ್ಲಿ ಜೈಷನ್-ಲೆವಿನಾ ಜೋಡಿಯ ವಿರುದ್ಧ 2022 ರಿಂದ 2026 ರವರೆಗೆ ಹಲವು ಪ್ರಕರಣಗಳು ದಾಖಲಾಗಿವೆ. ಇದರಲ್ಲಿ 15 ಪ್ರಕರಣ ವಿವಿಧ ಠಾಣೆಗಳಲ್ಲಿ, 11 ಪ್ರಕರಣಗಳು ಬೆಂಗಳೂರು ಕಮಿಷನರೇಟ್ ವ್ಯಾಪ್ತಿಯಲ್ಲಿ ದಾಖಲಾಗಿದೆ.
ಅವರು ಪ್ರೊಸೆಸರ್ ಸರ್ವೈಯರ್, ಎಸ್ ಡಿಎ, ಎಫ್ ಡಿ ಎ, ಚಾಲಕರ ಕೆಲಸ ಕೊಡಿಸುವಂತೆ ಹಣ ವಸೂಲಿ ಮಾಡಿದ್ದರು. ಬಂಧಿತರಿಂದ ಒಟ್ಟು 38 ಲಕ್ಷ ರೂ. ವಶಕ್ಕೆ ಪಡೆಯಲಾಗಿದೆ. ವಂಚನೆ ಮಾಡಿ ಪಡೆದ ಹಣವನ್ನು ಜಮೀನು ಮತ್ತು ಸೈಟ್ ಖರೀದಿ ಮಾಡಲು ಬಳಸಿರುವ ಬಗ್ಗೆ ಪರಿಶೀಲನೆ ನಡೆಯುತ್ತಿದೆ.
ಸಿಸಿಬಿ ಪೊಲೀಸರು ಪ್ರಕರಣವನ್ನು ವಿಶೇಷ ತಂಡ ರಚಿಸಿ, ಕೋರ್ಟ್ ಮೂಲಕ ವಂಚಿತ ಆಸ್ತಿ ಜಮೀನು-ಸೈಟ್ ಸೀಜ್ ಮಾಡಲು ಕ್ರಮ ಕೈಗೊಂಡಿದ್ದಾರೆ. ಘಟನೆಯಲ್ಲಿನ ಪ್ರಕರಣಗಳು ಯಲಹಂಕ, ಯಲಹಂಕ ನ್ಯೂ ಟೌನ್, ಬೊಮ್ಮನಹಳ್ಳಿ, ಆರ್.ಟಿ.ನಗರ, ಸಿಸಿಬಿ, ಗದಗ ಮತ್ತು ಮಂಡ್ಯ ಸೇರಿದಂತೆ ದಾಖಲಾಗಿವೆ.
ಇದನ್ನೂ ಓದಿ : ರಾಷ್ಟ್ರೀಯ ಹೆದ್ದಾರಿಯಲ್ಲಿ ಪುಂಡರ ವೀಲ್ಹಿಂಗ್ ಹುಚ್ಚಾಟ.. ಸಾರ್ವಜನಿಕರಿಗೆ ಪರದಾಟ


















