ಭಾರತೀಯ ಸಿನಿಮಾ ರಂಗದ ಡ್ಯಾನ್ಸ್ ಕೊರಿಯೋಗ್ರಾಫರ್, ಸಿನಿಮಾ ನಿರ್ದೇಶಕರಾಗಿರುವ ರೆಮೊ ಡಿಸೋಜಾ ಹಾಗೂ ಅವರ ಪತ್ನಿ ವಿರುದ್ಧ ವಂಚನೆ ಪ್ರಕರಣ ದಾಖಲಾಗಿದೆ.
11 ಕೋಟಿ ರೂ. ವಂಚಿಸಿರುವ ಆರೋಪ ಕೇಳಿ ಬಂದಿದೆ. ಮಹಾರಾಷ್ಟ್ರದ ಥಾಣೆ ಜಿಲ್ಲೆಯ ಮೀರಾ ರೋಡ್ ಪೊಲೀಸ್ ಠಾಣೆಯೊಂದರಲ್ಲಿ ರೆಮೊ ಡಿಸೋಜಾ ಹಾಗೂ ಇತರರ ವಿರುದ್ಧ ಪ್ರಕರಣ ದಾಖಲಾಗಿದೆ. 26 ವರ್ಷದ ಡ್ಯಾನ್ಸರ್ ಒಬ್ಬರು ರೆಮೊ ಸೇರಿದಂತೆ ಹಲವರ ವಿರುದ್ಧ ದೂರು ದಾಖಲಾಗಿದೆ.
ದಾಖಲಾಗಿರುವ ಎಫ್ಐಆರ್ನಂತೆ, ರೆಮೊ ಡಿಸೋಜಾ ಅವರ ಪತ್ನಿ ಲೀಜೆಲ್ಲಾ, ಓಂ ಪ್ರಕಾಶ್ ಶಂಕರ್ ಚೌಹಾಣ್, ರೋಹಿತ್ ಜಾಧವ್, ಫ್ರೇಂ ಪ್ರೊಡಕ್ಷನ್ ಕಂಪೆನಿ, ವಿನೋದ್ ರಾವತ್, ರಮೇಶ್ ಗುಪ್ತಾ ಮತ್ತು ಒಬ್ಬ ಪೊಲೀಸ್ ಅಧಿಕಾರಿಯ ವಿರುದ್ಧ ಸಹ ಯುವಕ ದೂರು ದಾಖಲಿಸಿದ್ದಾನೆ.
ದೂರು ನೀಡಿರುವ ಯುವಕನದ್ದು ಡ್ಯಾನ್ಸ್ ಗ್ರೂಫ್ ಇದೆ. 2018 ರಿಂದ 2024ರ ವರೆಗೆ ಹಲವು ಡ್ಯಾನ್ಸ್ ರಿಯಾಲಿಟಿ ಶೋಗಳಲ್ಲಿ ಇತರೆ ಡ್ಯಾನ್ಸ್ ಕಾಂಪಿಟೇಶನ್ ಗಳಲ್ಲಿ ಭಾಗವಹಿಸಿ ಹಲವು ಬಹುಮಾನಗಳನ್ನು ಗೆದ್ದಿದ್ದು, ರೆಮೊ ಡಿಸೋಜಾ ಹಾಗೂ ಇತರರು ಈ ಡ್ಯಾನ್ಸ್ ಗ್ರೂಪ್ ತಮ್ಮದೆಂದು ಸುಳ್ಳು ಹೇಳಿ ನಕಲಿ ಚಿತ್ರ, ದಾಖಲೆಗಳನ್ನು ಬಳಸಿ ಗೆದ್ದ ಹಣವನ್ನು ತಾವೇ ಇಟ್ಟುಕೊಂಡಿದ್ದಾರೆ ಎನ್ನಲಾಗಿದೆ. ಡ್ಯಾನ್ಸ್ ಗ್ರೂಪ್ಗೆ ಸೇರಬೇಕಾದ ಹಣ ಕೇಳಿದಾಗ ಬೆದರಿಕೆ ಸಹ ಹಾಕಿದ್ದಾರೆ ಎಂದು ದೂರುದಾರ ಆರೋಪಿಸಿದ್ದಾರೆ.