ಬೆಂಗಳೂರು ಮಳೆಗೆ ಜನ ತತ್ತರಿಸಿದ್ದು, ನಾಲ್ಕನೇ ಬಲಿಯಾಗಿದೆ. ಕೋರಮಂಗಲದಲ್ಲಿ ಮರ ಬಿದ್ದು ವ್ಯಕ್ತಿಯೊಬ್ಬರು ಸಾವನ್ನಪ್ಪಿದ್ದಾರೆ. ಮೂಡಲಾಗಿರಿ ( 50)ಸಾವನ್ನಪ್ಪಿರುವ ವ್ಯಕ್ತಿ. ಇಬ್ಬರು ವ್ಯಕ್ತಿಗಳು ಬೈಕ್ ನಲ್ಲಿ ತೆರಳುತ್ತಿದ್ದ ಸಂದರ್ಭದಲ್ಲಿ ಏಕಾಏಕಿ ಬೃಹತ್ ಮರ ಬಿದ್ದಿದೆ. ಪರಿಣಾಮ ಓರ್ವ ವ್ಯಕ್ತಿ ಸಾವನ್ನಪ್ಪಿ, ಮತ್ತೋರ್ವ ಗಂಭೀರವಾಗಿ ಗಾಯಗೊಂಡಿದ್ದಾರೆ. ಮೃತ ವ್ಯಕ್ತಿ ಎಲೆಕ್ಟ್ರಿಷಿಯನ್ ಆಗಿ ಕೆಲಸ ಮಾಡುತ್ತಿದ್ದರು ಎನ್ನಲಾಗಿದೆ.
ಕೋರಮಂಗಲದ ಸೌಭಾಗ್ಯ ಸ್ಟೋರ್ ಬಳಿ ಈ ದುರ್ಘಟನೆ ನಡೆದಿದೆ. ಸೇಂಟ್ ಜಾನ್ಸ್ ಆಸ್ಪತ್ರೆಗೆ ಮೃತದೇಹ ಸಾಗಿಸಲಾಗಿದೆ. ಸಾವನ್ನಪ್ಪಿದ ವ್ಯಕ್ತಿ ಆಡುಗೋಡೆ ನಿವಾಸಿ ಎನ್ನಲಾಗಿದೆ. ಈಗಾಗಲೇ ಮಳೆಗೆ ನಗರದಲ್ಲಿ ಮೂವರು ಸಾವನ್ನಪ್ಪಿದ್ದರು. ಈಗ ನಾಲ್ಕನೇ ಬಲಿಯಾಗಿದೆ.



















