ಹುಬ್ಬಳ್ಳಿ : ಕೆಮಿಕಲ್ ರಿಯಾಕ್ಷನ್‌ನಿಂದ ನಾಲ್ಕು ಜನ ಕಾರ್ಮಿಕರು ಅಸ್ವಸ್ಥಗೊಂಡಿರುವ ಘಟನೆ ಹುಬ್ಬಳ್ಳಿಯ ದೇಶಪಾಂಡೆ ನಗರದ ಖಾಸಗಿ ಬಿಲ್ಡಿಂಗ್ ನಲ್ಲಿ ನಡೆದಿದೆ. ಬೆಂಗಳೂರು ಮೂಲದ ಜಾಫರ್, ಅಮ್ಜದ್, ಜಬಿ ಹಾಗೂ ಹೈದರ್ ಎಂಬ ಕಾರ್ಮಿಕರು ಅಸ್ವಸ್ಥಗೊಂಡ 4 ಜನ ಕಾರ್ಮಿಕರು.
ಎಲ್ ಇ ಡಿ ಕೆಲಸಕ್ಕಾಗಿ 10 ದಿನಗಳ ಹಿಂದೆ ಹುಬ್ಬಳ್ಳಿಗೆ ಬಂದಿದ್ದ ಕಾರ್ಮಿಕರು, ಕಳೆದ ರಾತ್ರಿ ಕೆಲಸ ಮುಗಿಸಿ ನಾಲ್ಕು ಜನರು ಮಲಗಿದ್ದರು. ಫ್ಲೈಯ್ ವುಡ್ ಸೇರಿ ಹಲವು ಕೆಮಿಕಲ್‌ಗಳ ಕೆಲಸ ನಡೆದಿತ್ತು ಹಾಗೂ ಕೋಣೆ ಸಂಪೂರ್ಣವಾಗಿ ಬಂದ್ ಮಾಡಿದ ಹಿನ್ನೆಲೆ ಉಸಿರಾಟದ ತೊಂದರೆ ಉಂಟಾಗಿ ಪ್ರಜ್ಞೆ ಕಳೆದುಕೊಂಡಿದ್ದಾರೆ ಎನ್ನಲಾಗಿದೆ.
ಕೂಡಲೇ ಅಸ್ವಸ್ಥರನ್ನ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ರವಾನಿಸಿ, ತೀವ್ರ ನಿಗಾ ಘಟಕದಲ್ಲಿ ಕಾರ್ಮಿಕರಿಗೆ ಚಿಕಿತ್ಸೆ ನೀಡಲಾಗುತ್ತಿದೆ ಎಂದು ತಿಳಿದು ಬಂದಿದೆ.
ಇದನ್ನೂ ಓದಿ : ರೋಹಿತ್ ಶರ್ಮಾ ಫ್ಯಾನ್ಸ್ ಕೆಂಗಣ್ಣಿಗೆ ಗುರಿಯಾದ BCCI



















