ಮೈಸೂರು : ಬಿಜೆಪಿಗೆ ಗುಡ್ ಬೈ ಹೇಳಿ ಕಾಂಗ್ರೆಸ್ ಸೇರ್ಪಡೆಗೊಂಡಿದ್ದ ನಾಲ್ಕು ಜನ ಸದಸ್ಯರು ಅನರ್ಹರೆಂದು ಮೈಸೂರಿನ ಜಿಲ್ಲಾಧಿಕಾರಿಗಳ ನ್ಯಾಯಾಲಯದಿಂದ ಮಹತ್ವದ ಆದೇಶ ನೀಡಿದೆ.

ನಂಜನಗೂಡು ನಗರಸಭೆಯ ಚುನಾವಣೆಯ ವೇಳೆ ಬಿಜೆಪಿ ಪಕ್ಷದ ಚಿಹ್ನೆಯಿಂದ ಜಯ ಸಾಧಿಸಿ ಆಡಳಿತ ನಡೆಸುತ್ತಿದ್ದ ನಾಲ್ಕು ಜನ ನಗರಸಭಾ ಸದಸ್ಯರು ಕಾಂಗ್ರೆಸ್ ಸೇರ್ಪಡೆಗೊಂಡಿದ್ದರು.

ಬಿಜೆಪಿ ಚಿನ್ಹೆಯಿಂದ ಗೆದ್ದು ಅಧಿಕಾರದ ಗದ್ದುಗೆ ಹಿಡಿದಿದ್ದ ನಾಲ್ವರು ಸದಸ್ಯರಾದ ಗಿರೀಶ್ ಕುಮಾರ್ ಟಿಎಂ, ಗಾಯತ್ರಿ, ಮೀನಾಕ್ಷಿ ನಾಗರಾಜು, ವಿಜಯಲಕ್ಷ್ಮೀ ಅನರ್ಹಗೊಂಡಿರುವ ಸದಸ್ಯರು.

ನಂಜನಗೂಡು ನಗರದ ವಾರ್ಡ್ ನಂಬರ್ 1 ನೇ ಸದಸ್ಯ ಗಿರೀಶ್ ಕುಮಾರ್ ಟಿಎಂ, ವಾರ್ಡ್ ಸಂಖ್ಯೆ 12 ಸದಸ್ಯೆ ಗಾಯತ್ರಿ, ವಾರ್ಡ್ ನಂಬರ್ 22 ಸದಸ್ಯೆ ಮೀನಾಕ್ಷಿ ನಾಗರಾಜು, ವಾರ್ಡ್ ಸಂಖ್ಯೆ 27 ರ ಸದಸ್ಯೆ ವಿಜಯಲಕ್ಷ್ಮೀ ಎಂಬುವವರನ್ನು ಸಚೇತನ (ವಿಪ್) ಅನ್ನು ಉಲ್ಲಂಘನೆ ಮಾಡಿರುವುದರಿಂದ ಕರ್ನಾಟಕ ಸ್ಥಳೀಯ ಪ್ರಾಧಿಕಾರಗಳ ಪಕ್ಷಾಂತರ ನಿಷೇಧ ಅದಿನಿಯಮ 1987 ಸೆಕ್ಷನ್ 3(1)(b) ಉಲ್ಲಂಘನೆಯ ಆಧಾರದ ಮೇಲೆ ನಾಲ್ವರು ನಗರಸಭಾ ಸದಸ್ಯರ ಸದಸ್ಯತ್ವದಿಂದ ಅನರ್ಹಗೊಳಿಸಲಾಗಿದೆ.