ಬೆಂಗಳೂರು: ಬರ್ಮಿಂಗ್‌ಹ್ಯಾಮ್‌ನ ಎಜ್‌ಬಾಸ್ಟನ್ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆದ ‘ದಿ ಹಂಡ್ರೆಡ್’ ಪಂದ್ಯದಲ್ಲಿ ಬರ್ಮಿಂಗ್‌ಹ್ಯಾಮ್ ಫೀನಿಕ್ಸ್ ತಂಡದ ಆಲ್‌ರೌಂಡರ್ ಲಿಯಾಮ್ ಲಿವಿಂಗ್‌ಸ್ಟೋನ್, ಸ್ಪೋಟಕ ಅರ್ಧಶತಕ ಗಳಿಸುವ ಮೂಲಕ ಟಿ20 ಕ್ರಿಕೆಟ್‌ನಲ್ಲಿ ಹೊಸ ದಾಖಲೆ ಸೃಷ್ಟಿಸಿದ್ದಾರೆ. ಈ ಪಂದ್ಯದಲ್ಲಿ ಲಿಯಾಮ್, ವಿಶ್ವದ ಶ್ರೇಷ್ಠ ಸ್ಪಿನ್ನರ್‌ಗಳಲ್ಲಿ ಒಬ್ಬರಾದ ರಶೀದ್ ಖಾನ್ ಎದುರು 200 ಟಿ20 ರನ್‌ಗಳನ್ನು ಪೂರ್ಣಗೊಳಿಸಿದ ವಿಶ್ವದ ಮೊದಲ ಬ್ಯಾಟ್ಸ್‌ಮನ್ ಎಂಬ ಹೆಗ್ಗಳಿಕೆಗೆ ಪಾತ್ರರಾದರು.
ದಿ ಓವಲ್ ಇನ್ವಿನ್ಸಿಬಲ್ಸ್ ವಿರುದ್ಧದ ಈ ಪಂದ್ಯದಲ್ಲಿ ಲಿಯಾಮ್ ಲಿವಿಂಗ್‌ಸ್ಟೋನ್ ಕೇವಲ 27 ಎಸೆತಗಳಲ್ಲಿ 255.55ರ ಸ್ಟ್ರೈಕ್ ರೇಟ್‌ನಲ್ಲಿ ಅಜೇಯ 69 ರನ್‌ಗಳನ್ನು ಗಳಿಸಿದರು. ಅವರ ಈ ಸ್ಫೋಟಕ ಇನ್ನಿಂಗ್ಸ್‌ನಲ್ಲಿ ಐದು ಸಿಕ್ಸರ್ ಹಾಗೂ ಏಳು ಬೌಂಡರಿಗಳು ಸೇರಿದ್ದವು. ಇದೇ ಇನ್ನಿಂಗ್ಸ್‌ನಲ್ಲಿ ಅವರು ರಶೀದ್ ಖಾನ್ ಎಸೆದ ಕೇವಲ ಐದು ಎಸೆತಗಳಲ್ಲಿ ಎರಡು ಬೌಂಡರಿ ಮತ್ತು ಮೂರು ಸಿಕ್ಸರ್ ಸೇರಿದಂತೆ 26 ರನ್‌ಗಳನ್ನು ಬಾರಿಸಿದರು. ಈ ಸಾಧನೆಯಿಂದ ಅವರು ಈ ಐತಿಹಾಸಿಕ ದಾಖಲೆಯನ್ನು ನಿರ್ಮಿಸಿದರು.
ರಶೀದ್ ಖಾನ್ ಎದುರು ಪ್ರಮುಖ ದಾಖಲೆಗಳು
ಲಿಯಾಮ್ ಲಿವಿಂಗ್‌ಸ್ಟೋನ್ ತಮ್ಮ ಬ್ಯಾಟಿಂಗ್ ಮೂಲಕ ರಶೀದ್ ಖಾನ್ ಅವರಂತಹ ಬೌಲರ್ ಎದುರು ಟಿ20 ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ರನ್ ಮತ್ತು ಸಿಕ್ಸರ್ ಗಳಿಸಿದ ಆಟಗಾರ ಎಂಬ ವಿಶೇಷ ಸಾಧನೆ ಮಾಡಿದ್ದಾರೆ.
ರಶೀದ್ ಖಾನ್ ಎದುರು ಅತಿ ಹೆಚ್ಚು ಟಿ20 ರನ್ ಗಳಿಸಿದ ಬ್ಯಾಟರ್ಸ್:
- ಲಿಯಾಮ್ ಲಿವಿಂಗ್‌ಸ್ಟೋನ್: 200 ರನ್
- ಕೈರೊನ್ ಪೊಲಾರ್ಡ್: 125 ರನ್
- ಸೂರ್ಯಕುಮಾರ್ ಯಾದವ್: 124 ರನ್
- ಸಂಜು ಸ್ಯಾಮ್ಸನ್: 121 ರನ್
- ರಿಷಭ್ ಪಂತ್: 120 ರನ್
ರಶೀದ್ ಖಾನ್ ಎದುರು ಅತಿ ಹೆಚ್ಚು ಸಿಕ್ಸರ್ ಬಾರಿಸಿದ ಬ್ಯಾಟರ್ಸ್: - ಲಿಯಾಮ್ ಲಿವಿಂಗ್‌ಸ್ಟೋನ್: 21 ಸಿಕ್ಸರ್‌ಗಳು
- ಕ್ರಿಸ್ ಗೇಲ್: 12 ಸಿಕ್ಸರ್‌ಗಳು
- ಕೀರನ್ ಪೊಲಾರ್ಡ್: 9 ಸಿಕ್ಸರ್‌ಗಳು
- ಆಂಡ್ರೆ ರಸೆಲ್: 9 ಸಿಕ್ಸರ್‌ಗಳು
- ಶಿಮ್ರಾನ್ ಹೆಟ್ಮಾಯರ್: 8 ಸಿಕ್ಸರ್‌ಗಳು



















