ದಾವಣಗೆರೆ: ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ವಿರುದ್ಧ ಸಂಸದ ಡಾ. ಸುಧಾಕರ್ ವಾಗ್ದಾಳಿ ನಡೆಸಿದ್ದು, ಆರೋಪ – ಪ್ರತ್ಯಾರೋಪಕ್ಕೆ ಕಾರಣವಾಗುತ್ತಿದೆ. ಸುಧಾಕರ್ ಹೇಳಿಕೆಯನ್ನು ಯತ್ನಾಳ್ ಹೊಗಳಿದರೆ, ಮಾಜಿ ಸಚಿವ ಎಂ.ಪಿ. ರೇಣುಕಾಚಾರ್ಯ(M.P. Renukacharya) ವಿರೋಧಿಸಿದ್ದಾರೆ. ಅಲ್ಲದೇ, ಸಂಸದರಿಗೆ ಅವಾಜ್ ಹಾಕಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಎಂ.ಪಿ. ರೇಣುಕಾಚಾರ್ಯ, ಸುಧಾಕರ್ (K.Sudhakar) ವಿರುದ್ಧ ಏಕವಚನದಲ್ಲೇ ವಾಗ್ದಾಳಿ ನಡೆಸಿದ್ದಾರೆ. ಬಿಜೆಪಿ ರಾಜ್ಯಾಧ್ಯಕ್ಷರ ವಿಜಯೇಂದ್ರ (B.Y Vijayendra) ವಿರುದ್ಧ ಮಾತನಾಡಿದ್ದಕ್ಕೆ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ನೀನು ಕಾಂಗ್ರೆಸ್‍ನಲ್ಲಿ ಸಚಿವ ಸ್ಥಾನಕ್ಕೆ ಪಟ್ಟು ಹಿಡಿದು, ಸ್ಥಾನ ಕೊಡದಿದ್ದಕ್ಕೆ ಮುಂಬೈಗೆ ಹೋಗಿ ಬಂದೆ. ಬಿಜೆಪಿಗೆ ಬಂದು ಆರೋಗ್ಯ ಹಾಗೂ ವೈದ್ಯಕೀಯ ಶಿಕ್ಷಣ ಇಲಾಖೆ ಎರಡೂ ಖಾತೆ ಬೇಕು ಎಂದು ಮುನಿಸಿಕೊಂಡು ಮನೆಯಲ್ಲಿ ಕುಳಿತುಕೊಂಡಿದ್ದೆ.
ನಿನ್ನ ಥರ್ಡ್ ಕ್ಲಾಸ್ ರಾಜಕಾರಣ ಇಡೀ ರಾಜ್ಯಕ್ಕೆ ಗೊತ್ತು. ಸಚಿವನಾಗಿದ್ದಾಗ ಶಾಸಕರ ಕರೆ ಸ್ವೀಕಾರ ಮಾಡುತ್ತಿರಲಿಲ್ಲ. ನಾನು ಜಗಳ ಮಾಡಿ ಹೊನ್ನಾಳಿಗೆ 200 ಬೆಡ್ ಆಸ್ಪತ್ರೆ ತಂದಿದ್ದೆ. ಯಡಿಯೂರಪ್ಪ, ದಾವಣಗೆರೆಗೆ ಜಯದೇವ ಆಸ್ಪತ್ರೆ ಶಾಖೆ ಮಂಜೂರು ಮಾಡಿದ್ದರು. ಅದನ್ನು ನೀನು ರದ್ದು ಮಾಡಿದ್ದೆ. ಸಚಿವನಾಗಿದ್ದಾಗ ನೀನು ಮಾಡಬಾರದ್ದು ಮಾಡಿದ್ದಿ. ನಿನ್ನ ಬಂಡವಾಳ ಬಯಲು ಮಾಡುತ್ತೇನೆ ಎಂದು ಗುಡುಗಿದ್ದಾರೆ.