ಬೆಂಗಳೂರು: ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ (Lakshmi Hebbalkar) ವಿರುದ್ಧ ಅಶ್ಲೀಲ ಪದ ಬಳಕೆ ಮಾಡಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಸಚಿವ ಸಿ.ಟಿ. ರವಿಗೆ (CT Ravi) ತಾತ್ಕಾಲಿಕ ರಿಲೀಫ್ ಸಿಕ್ಕಿದೆ.
ಸಿ.ಟಿ. ರವಿಗೆ ಹೈಕೋರ್ಟ್ (High Court) ತಾತ್ಕಾಲಿಕ ರಿಲೀಫ್ ನೀಡಿದೆ. ಎಫ್ ಐಆರ್ ರದ್ದು ಕೋರಿ ಸಿಟಿ ರವಿ ಸಲ್ಲಿಸಿದ್ದ ಅರ್ಜಿ ವಿಚಾರಣೆಯನ್ನು ಇಂದು ಹೈಕೋರ್ಟ್ ನಡೆಸಿತು. ಈ ವೇಳೆ ತನಿಖೆಯ ವ್ಯಾಪ್ತಿಯ ಪ್ರಶ್ನೆ ತೀರ್ಮಾನಿಸಬೇಕಿದೆ ಎಂದು ಅಭಿಪ್ರಾಯಪಟ್ಟು ಫೆ. 20ರ ವರೆಗೆ ನ್ಯಾ.ಎಂ.ನಾಗಪ್ರಸನ್ನ ಅವರಿದ್ದ ಪೀಠ ಮಧ್ಯಂತರ ತಡೆ ನೀಡಿ ನೀಡಿದೆ. ಅಲ್ಲದೇ, ದೂರುದಾರೆ ಲಕ್ಷ್ಮೀ ಹೆಬ್ಬಾಳ್ಕರ್ ಗೆ ನೋಟಿಸ್ ಜಾರಿ ಮಾಡಿದೆ.
ಸಿ.ಟಿ. ರವಿ ಪರ ವಾದ ಮಂಡಿಸಿದ ಪ್ರಭುಲಿಂಗ ನಾವದಗಿ, ಸದನದಲ್ಲಿ ಭೀತಿ ರಹಿತವಾಗಿ ಮಾತನಾಡಲು ಅವಕಾಶವಿದೆ. ಮಹಿಳೆ ಗೌರವಕ್ಕೆ ಧಕ್ಕೆಯಾಗುವ ಮಾತುಗಳಿದ್ದರೂ ಸಭಾಪತಿ ಕ್ರಮ ಕೈಗೊಳ್ಳಬಹುದು ಎಂದು ವಾದಿಸಿದ್ದಾರೆ.
ಎಸ್‌ಪಿಪಿ ಬಿ.ಎ.ಬೆಳ್ಳಿಯಪ್ಪ ಅವರು,ರವಿ ಅವರ ಧ್ವನಿ ಮಾದರಿ ಪಡೆಯಲು ಅವಕಾಶ ನೀಡಬೇಕೆಂದು. ಸದನದ ವ್ಯಾಪ್ತಿಯ ಚರ್ಚೆಗೆ ಮಾತ್ರ ಕ್ರಮದಿಂದ ವಿನಾಯಿತಿ ಇದೆ. ಟೇಬಲ್ ಮುರಿದು ದಾಂಧಲೆ, ಅಶ್ಲೀಲ ಪದ ಬಳಕೆಗೆ ವಿನಾಯಿತಿ ಇಲ್ಲ ಎಂದು ವಾದಿಸಿದರು. ವಾದ -ವಿವಾದದ ನಂತರ ಕೋರ್ಟ್, ಫೆ. 20ರ ವರೆಗೆ ಮಧ್ಯಂತರ ತಡೆ ನೀಡಿ ತೀರ್ಪು ನೀಡಿದೆ.