ಬೆಂಗಳೂರು: ಬಿಗ್ ಬಾಸ್ ಮಾಜಿ ಸ್ಪರ್ಧಿ, ನಟಿ ದಿವ್ಯಾ ಸುರೇಶ್ ಹಿಟ್ ಅಂಡ್ ರನ್ ಮಾಡಿ ಪರಾರಿಯಾಗಿದ್ದ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ಬ್ಯಾಟರಾಯನಪುರದ ಎಂ.ಎಂ.ರಸ್ತೆಯಲ್ಲಿ ಇದೇ ತಿಂಗಳ ಅ. 4 ರಂದು ರಾತ್ರಿ 1.30ರ ಹೊತ್ತಿಗೆ ದಿವ್ಯಾ ಸುರೇಶ್ ಓಡಿಸುತ್ತಿದ್ದ ಕಾರ್, ಬೈಕ್ ಗೆ ಡಿಕ್ಕಿಯಾದ ರಭಸಕ್ಕೆ, ಬೈಕ್ ನಿಂದ ಬಿದಿದ್ದ ಮೂವರಲ್ಲಿ ಒರ್ವ ಮಹಿಳೆಗೆ ಗಂಭೀರ ಗಾಯವಾಗಿದೆ ಎಂದು ತಿಳಿದು ಬಂದಿದೆ.
ಗಾಯಾಳು ಅನಿತಾ ಸಂಬಂಧಿ ಅನುಷಾಗೆ ಹೊಟ್ಟೆ ನೋವು ಕಾಣಿಸಿಕೊಂಡಿತ್ತು. ಹೀಗಾಗಿ ಬೈಕ್ ನಲ್ಲಿ ಸಂಬಂಧಿಗಳಾದ ಕಿರಣ್, ಅನಿತಾ ಆಸ್ಪತ್ರೆಗೆ ತೆರಳುತ್ತಿದ್ದರು. ಈ ವೇಳೆ ಬ್ಯಾಟರಾನಪುರದ ಎಂ.ಎಂ.ರಸ್ತೆ ಬಳಿ ನಾಯಿಗಳು ಬೊಗಳಿವೆ. ಭಯದಿಂದ ಕಿರಣ್ ಬೈಕ್ ಅನ್ನು ಸ್ವಲ್ಪ ಬಲಕ್ಕೆ ಹೋಗಿದ್ದಾರೆ. ಈ ವೇಳೆ ವೇಗವಾಗಿ ಬಂದ ದಿವ್ಯಾ ಸುರೇಶ್ ಕಾರ್ ಬೈಕ್‌ಗೆ ಡಿಕ್ಕಿ ಹೊಡೆದಿದೆ. ಕಾರ್ ಡಿಕ್ಕಿ ಹೊಡೆದಾಗ ಅನಿತಾ ಕಾಲಿನ ಮಂಡಿ ಚಿಪ್ಪಿಗೆ ಪೆಟ್ಟಾಗಿದೆ. ನಂತರ ಗಾಯಳುವನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆಸ್ಪತ್ರೆಯಲ್ಲಿ ಪರೀಕ್ಷೆ ನಡೆಸಿದ ವೈದ್ಯರು ಕಾಲಿನ ಮಂಡಿ ಚಿಪ್ಪು ಮುರಿದಿದೆ ಎಂದು ತಿಳಿಸಿದ್ದಾರೆ.

ದಿವ್ಯಾ ಸುರೇಶ್ ಗಾಯಾಳುಗಳನ್ನು ನೋಡದೇ ಕಾರ್ ನಿಲ್ಲಿಸದೇ ಕೂಡಲೇ ಪರಾರಿಯಾಗಿದ್ದಾರೆ ಎಂದು ಗಾಯಾಳು ಸಂಬಧಿ ಕಿರಣ ಎಂಬಾತ ಅ.7ರಂದು ಬ್ಯಾಟರಾಯನಪುರ ಸಂಚಾರಿ ಠಾಣೆಗೆ ದೂರು ನೀಡಿದ್ದಾರೆ.
ಕಿರಣ್ ನೀಡಿದ ದೂರಿನ ಅನ್ವಯ ಎಫ್ ಐಆರ್ ದಾಖಲಿಸಿ ತನಿಖೆ ಕೈಗೊಂಡ ಬ್ಯಾಟರಾಯನಪುರ ಸಂಚಾರಿ ಪೊಲೀಸರಿಗೆ, ನಟಿ ದಿವ್ಯಾ ಸುರೇಶ್ ಕಾರ್ ನಿಂದ ಡಿಕ್ಕಿ ಹೊಡೆದು ಹೋಗಿರುವುದು ಗೊತ್ತಾಗಿದೆ. ಬಳಿಕ ಸಿಸಿಟಿವಿ ಮೂಲಕ ಕಾರ್ ನಂಬರ್ ಟ್ರೇಸ್ ಮಾಡಿ ದಿವ್ಯಾ ಸುರೇಶ್ ಅವರನ್ನು ಕರೆಸಿದ್ದ ಪೊಲೀಸರು, ಬಳಿಕ ದಿವ್ಯಾ ಸುರೇಶ್ ಕಾರ್ ಪತ್ತೆ ಮಾಡಿ ಸೀಜ್ ಮಾಡಿ, ಕಾನೂನು ಪ್ರಕಾರ ಕ್ರಮ ಕೈಗೊಂಡಿದ್ದಾರೆ.

ರಾತ್ರೋ ರಾತ್ರಿ ದಿವ್ಯಾ ಸುರೇಶ್ ಕಾರ್ ಬಿಡಿಸಿಕೊಂಡು ಹೋಗಿದ್ದರು. ಸದ್ಯ ತನಿಖೆ ಮುಂದುವರೆಸಿರುವ ಬ್ಯಾಟರಾಯನಪುರ ಸಂಚಾರಿ ಪೊಲೀಸರು. ಇನ್ನು ಈ ನಡುವೆ ಬಿಜೆಎಸ್ ಆಸ್ಪತ್ರೆಯಲ್ಲಿ ಗಾಯಳು ಅನಿತಾಗೆ ಮಂಡಿ ಚಿಪ್ಪಿಗೆ ಆಪರೇಷನ್ ಮಾಡಿರುವ ವೈದ್ಯರು ಎರಡು ಲಕ್ಷ ಹಣ ಆಪರೇಷನ್ ಗೆ ಖರ್ಚಾಗಿದೆ. ಇದುವರೆಗೂ ದಿವ್ಯಾ ಸುರೇಶ್ ಸಂತ್ರಸ್ಥ ಮಹಿಳೆಯನ್ನು ಸಂಪರ್ಕಿಸಿಲ್ಲ ಎಂದು ದೂರುದಾರ ಕಿರಣ್ ತಿಳಿಸಿದ್ದಾರೆ.



















