ಬೀದರ್ | ಭಾಲ್ಕಿ ಪಟ್ಟಣದ ಅರಣ್ಯ ಕಚೇರಿಯ ಪಕ್ಕದಲ್ಲಿರುವ ವಸತಿ ಗೃಹದಲ್ಲಿ ಫಾರೆಸ್ಟ್ ವಾಚರ್ ಒಬ್ಬರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಳಕಿಗೆ ಬಂದಿದೆ. ಅಂಕುಶ್ ಕರಲೇಕರ್ (57) ಆತ್ಮಹತ್ಯೆ ಮಾಡಿಕೊಂಡ ವಾಚರ್
ಭಾಲ್ಕಿ ತಾಲೂಕಿನ ಬೋಳೆಗಾವ ಗ್ರಾಮದ ಫಾರೆಸ್ಟ್ ವಾಚರ್ ಅಂಕುಶ್ ಕರಲೇಕರ್, ಭಾಲ್ಕಿಯ ಅರಣ್ಯ ಇಲಾಖೆಯಲ್ಲಿ ವಾಚರ್ ಆಗಿ ಹಲವು ವರ್ಷಗಳಿಂದ ಕಾರ್ಯ ನಿರ್ವಹಿಸುತ್ತಿದ್ದರು. ಅಂಕುಶ್ ಅವರು ಶುಕ್ರವಾರ (ಫೆ.6) ಬೆಳಗ್ಗೆ ಇದ್ದಕ್ಕಿದಂತೆ ವಸತಿ ಗೃಹದಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಅಂಕುಶ್ ಕರಲೇಕರ್ ಆತ್ಮಹತ್ಯೆ ಹಿಂದೆ ಸಾಕಷ್ಟು ಅನುಮಾನ ಹುಟ್ಟಿಕೊಂಡಿದ್ದು, ಆತ್ಮಹತ್ಯೆ ಮಾಡಿಕೊಳ್ಳಲು ನಿಖರ ಕಾರಣ ಏನು ಎಂಬುದು ಇನ್ನು ತಿಳಿದುಬಂದಿಲ್ಲ. ಘಟನಾ ಸಂಬಂಧ ಭಾಲ್ಕಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದೆ.
ಇದನ್ನೂ ಓದಿ : ಲಕ್ಷ್ಮೀ ಹೆಬ್ಬಾಳ್ಕರ್ ಭರ್ಜರಿ ಬೌಲಿಂಗ್‌ಗೆ ಸತೀಶ್ ಜಾರಕಿಹೊಳಿ ‘ಕ್ಲೀನ್ ಬೋಲ್ಡ್’!



















