ಬೆಂಗಳೂರು : ಪ್ರಚಾರದ ತೆವಲಿಗೆ ಬಿದ್ದು, ಸಿಎಂ ಸಿದ್ದರಾಮಯ್ಯ ಅವರನ್ನು ಮೆಚ್ಚಿಸುವುದಕ್ಕೆಂಬ ಭರದಲ್ಲಿ ಅಧಿಕಾರಿಗಳು ಯಡವಟ್ಟು ಮಾಡಿಕೊಂಡಿದ್ದಾರೆ ಎಂಬ ಗಂಭೀರ ಆರೋಪವೊಂದು ಕೇಳಿಬಂದಿದೆ.
ಲಕ್ಷಾಂತರ ರೂಪಾಯಿ ದುಂದು ವೆಚ್ಚ ಮಾಡಿದ್ದಾರೆಂಬ ಆರೋಪಕ್ಕೆ ಸಾರ್ವಜನಿಕ ವಲಯದಲ್ಲಿ ಆರೋಪ ಕೇಳಿ ಬಂದಿದೆ. ಜುಲೈ 14 ರಂದು HSR ಲೇಔಟ್ ನಲ್ಲಿ ಸಿಎಂ ನೇತೃತ್ವದಲ್ಲಿ ಸಸಿ ನಡೆಯುವ ಕಾರ್ಯಕ್ರಮವನ್ನು ಬೊಮ್ಮನಹಳ್ಳಿ ಕಾಂಗ್ರೆಸ್ ಮುಖಂಡ ಉಮಾಪತಿಗೌಡ ನೇತೃತ್ವದಲ್ಲಿ ಮಾಡಲಾಗಿತ್ತು.
ಸಿಎಂ ಕಾರ್ಯಕ್ರಮಕ್ಕೆ ಬರುತ್ತಾರೆಂದು 10 ಸಾವಿರಕ್ಕೂ ಹೆಚ್ಚು ಔಷಧಿಯುಕ್ತ ಸಸಿಗಳನ್ನು ತರಿಸಲಾಗಿತ್ತು. ಕಾರಣಾಂತರಗಳಿಂದ ಸಿಎಂ ಕಾರ್ಯಕ್ರಮಕ್ಕೆ ಬರಲಿಲ್ಲ. ದಿಢೀರ್ ಕಾರ್ಯಕ್ರಮ ರದ್ಧಾಗಿರುವುದರಿಂದ ಸಸಿಗಳನ್ನು ಅಧಿಕಾರಿಗಳು ಬೇಕಾಬಿಟ್ಟಿ ಬಿಸಾಡಿದ್ದಾರೆ ಎಂದು ಆರೋಪ ಕೇಳಿ ಬಂದಿದೆ. ಸಾರ್ವಜನಿಕರ ಹಣವನ್ನು ಈ ರೀತಿಯಲ್ಲಿ ದುಂದು ವೆಚ್ಚ ಮಾಡಿದ್ದಾರೆ.
ಕಾರ್ಯಕ್ರಮ ನಡೆದು ಆರು ದಿನಗಳು ಕಳೆದರೂ ಸಸಿಗಳು ಮೈದಾನದಲ್ಲಿ ಸಸಿಗಳು ಬೇಕಾಬಿಟ್ಟಿ ಬಿದ್ದಿವೆ. ಸಸಿಗಳನ್ನು ನಿರ್ಲಕ್ಷ್ಯವಹಿಸಿರುವ ಅರಣ್ಯಾಧಿಕಾರಿಗಳ ಕ್ರಮಕ್ಕೆ ಪರಿಸರವಾದಿಗಳ ಅಸಮಧಾನ ವ್ಯಕ್ತಪಡಿಸಿದ್ದಾರೆ. ಪರಿಸರವಾದಿ ಯಲ್ಲಪ್ಪ ರೆಡ್ಡಿ ಕೂಡ ತೀವ್ರ ಅಸಮಾಧಾನ ಹೊರ ಹಾಕಿದ್ದಾರೆ.
ಈ ವಿಚಾರ ತಿಳಿದ ಸ್ಥಳೀಯ ಶಾಸಕ ಸತೀಶ್ ರೆಡ್ಡಿ, ಕಾಂಗ್ರೆಸ್ ಮುಖಂನ ಬೇಜವಾಬ್ದಾರಿಗೆ ಹಾಗೂ ಅರಣ್ಯಾಧಿಕಾರಿಗಳ ನಿರ್ಲಕ್ಷ್ಯ ಧೋರಣೆಗೆ ತೀವ್ರ ಆಕ್ರೋಶ ಹೊರ ಹಾಕಿದ್ದಾರೆ. ಮಾತ್ರವಲ್ಲದೇ, ಬೇಕಾಬಿಟ್ಟ ಬಿದ್ದಿರುವ ಸಸಿಗಳನ್ನು ಸ್ಥಳೀಯರಿಗೆ ಕೊಟ್ಟು ನಡುವಂತೆ ಮನವಿ ಮಾಡಿಕೊಂಡಿದ್ದಾರೆ. ತಲಾ ಒಂದು ಸಸಿಗೆ 200 ರೂಪಾಯಿಯಂತೆ ಕಾರ್ಯಕ್ರಮಕ್ಕೆ 10 ಸಾವಿರ ಸಸಿಗಳನ್ನು ತರಿಸಲಾಗಿತ್ತು. 20 ಲಕ್ಷ ಹಣ ಪೋಲು ಮಾಡಿದ್ದಾರೆ. ನರ್ಸರಿಯಿಂದ ಕಾರ್ಯಕ್ರಮ ಸ್ಥಳಕ್ಕೆ ತರಲು ವೆಚ್ಚ 1 ಲಕ್ಷ ರೂಪಾಯಿ ದುಂದುವೆಚ್ಚ ಮಾಡಿದ್ದಾರೆ.



















