ಚಾಮರಾಜನಗರ: ಇಲ್ಲಿನ ವಿವಿ ಆವರಣದಲ್ಲಿರುವ ಸಾಮಾಜಿಕ ಅರಣ್ಯದಲ್ಲಿ ಬೆಂಕಿ ಕಾಣಿಸಿಕೊಂಡಿರುವ ಘಟನೆ ನಡೆದಿದೆ.
ರಾಜ್ಯದಲ್ಲಿ ಇತ್ತೀಚೆಗೆ ಬೆಂಕಿ ಅವಘಡಗಳು ಹೆಚ್ಚಾಗಿ ನಡೆಯುತ್ತಿರುವುದು ಕೂಡ ಆತಂಕಕ್ಕೆ ಕಾರಣವಾಗುತ್ತಿದೆ. ಈಗ ವಿವಿ ಆವರಣದಲ್ಲಿನ ಅರಣ್ಯಕ್ಕೆ ಏಕಾಏಕಿ ಬೆಂಕಿ ತಗುಲಿದೆ. ಪರಿಣಾಮ ಹತ್ತಾರು ಎಕರೆ ಕುರುಚಲು ಗಿಡಗಳು ಬೆಂಕಿಗೆ ಆಹುತಿಯಾಗಿವೆ. ಬೆಂಕಿಯ ಕೆನ್ನಾಲೆಗೆ ಕುರುಚಲು ಕಾಡು ಧಗಧಗನೇ ಹೊತ್ತಿ ಉರಿದಿದೆ.
ಕೂಡಲೇ ವಿದ್ಯಾರ್ಥಿಗಳು ಹಾಗೂ ವಿವಿ ಸಿಬ್ಬಂದಿ ಬೆಂಕಿ ನಂದಿಸಲು ಯತ್ನಿಸಿದ್ದಾರೆ. ಆದರೂ ಅದು ಹತೋಟಿಗೆ ಬಂದಿಲ್ಲ. ನಂತರ ಸ್ಥಳಕ್ಕೆ ಅರಣ್ಯ ಸಿಬ್ಬಂದಿಗಳು ಸ್ಥಳಕ್ಕೆ ಆಗಮಿಸಿದ್ದಾರೆ. ಆದರೆ, ಘಟನೆಗೆ ನಿಖರ ಕಾರಣ ತಿಳಿದು ಬಂದಿಲ್ಲ.