ಬೆಂಗಳೂರು: ನಗರದಲ್ಲಿ ಅಕ್ರಮ ವಲಸಿಗರ ಸಂಖ್ಯೆ ಹೆಚ್ಚಾಗುತ್ತಿದ್ದು, ಹಲವರು ಹಲವು ಕಾರಣಗಳಿಂದ ತಮ್ಮ ದೇಶಕ್ಕೆ ಹೋಗದೆ ಇಲ್ಲಿಯೇ ಉಳಿದುಕೊಂಡಿದ್ದಾರೆ.
ಹೀಗಾಗಿ ವಿದ್ಯಾಭ್ಯಾಸ ಸೇರಿದಂತೆ ಬೇರೆ ಉದ್ದೇಶಗಳಿಗಾಗಿ ಬೆಂಗಳೂರಿಗೆ ಬಂದು ವೀಸಾ ಅವಧಿ ಮುಗಿದರೂ ಇಲ್ಲೇ ನೆಲೆಸುತ್ತಿರುವ ವಿದೇಶಿಗರ ಮೇಲೆ ಪೊಲೀಸರು ಕ್ರಮ ಕೈಗೊಳ್ಳುತ್ತಿದ್ದಾರೆ. ಇದೇ ಮೂರು ವರ್ಷಗಳಲ್ಲಿ 83 ಇಂತಹ ಪ್ರಕರಣಗಳು ರಾಜ್ಯದಲ್ಲಿ ದಾಖಲಾಗಿವೆ. ಈ ಪೈಕಿ 127 ಮಂದಿಯನ್ನು ದಸ್ತಗಿರಿ ಮಾಡಲಾಗಿದೆ.
ಬೆಂಗಳೂರು ನಗರದಲ್ಲಿ ವೀಸಾ ಅವಧಿ ಮುಗಿದರೂ ಸಾಕಷ್ಟು ಸಂಖ್ಯೆಯಲ್ಲಿ ವಿದೇಶಿಗರು ವಾಸವಾಗಿದ್ದಾರೆ. ಇಂತಹ ವಿದೇಶಿಗರು ಕಾನೂನು ಉಲ್ಲಂಘಿಸಿ ಶಾಂತಿ ಸುವ್ಯವಸ್ಥೆಗೆ ಭಂಗ ತರುತ್ತಿದ್ದಾರೆ ಎಂಬ ಆರೋಪಗಳು ಕೂಡ ಇವೆ. ಹೀಗಾಗಿ ಪೊಲೀಸರು ಎಚ್ಚೆತ್ತುಕೊಂಡಿದ್ದಾರೆ. ಅಪರಾಧ ಪ್ರಕರಣಗಳಲ್ಲಿ ಇಂತಹ ವಿದೇಶಿಗರು ಭಾಗಿಯಾದಲ್ಲಿ ಅವರ ವಿರುದ್ಧ ಪ್ರಕರಣ ದಾಖಲಿಸಿ, ನ್ಯಾಯಾಲಯದಲ್ಲಿ ಇತ್ಯರ್ಥ್ಯ ಆಗುವ ವರೆಗೆ ಪಾರಿನರ್ಸ್ ರಿಸ್ಟ್ರಿಕ್ಷನ್ ಸೆಂಟರ್‌ನಲ್ಲಿ ಇರಿಸಲಾಗುತ್ತಿದೆ. ಆನಂತರ ಗಡಿಪಾರು ಮಾಡಲಾಗುತ್ತಿದೆ.
ಯಾವ ದೇಶದ ಪ್ರಜೆಗಳು ಹೆಚ್ಚು?
ಬೆಂಗಳೂರಿನಲ್ಲಿ ಅಕ್ರಮವಾಗಿ ನೈಜೀರಿಯಾ, ಸುಡಾನ್, ಯೆಮೆನ್ ಹಾಗೂ ಕಾಂಗೋ ದೇಶದ ಪ್ರಜೆಗಳು ಹೆಚ್ಚಾಗಿ ಅಕ್ರಮವಾಗಿ ನೆಲೆ ನಿಂತಿದ್ದಾರೆ. ನೈಜೀರಿಯನ್ ಪ್ರಜೆಗಳು ಮಾದಕ ವಸ್ತುಗಳ ಮಾರಾಟ ಪ್ರಕರಣಗಳಲ್ಲಿ ಭಾಗಿಯಾಗಯತ್ತಿದ್ದಾರೆ.
ಅವಧಿ ಮೀರಿ ವಾಸವಾದವರ ವಿರುದ್ಧ ಪ್ರಕರಣ
2023- 54
2024 – 29
2025 -00
ದಸ್ತಗಿರಿ ಮಾಡಿರುವ ಪ್ರಕರಣಗಳು
2023 – 81
2024 – 46
2025 -00
ಗಡಿಪಾರು ಮಾಡಿರುವ ಪ್ರಕರಣಗಳು
2022- 6
2023 – 116
2024 – 182 ಇಂತಹ ವಿದೇಶಿ ಪ್ರಜೆಗಳು ಅಕ್ರಮವಾಗಿ ನೆಲೆ ನಿಲ್ಲುವುದಷ್ಟೇ ಅಲ್ಲ, ಅಕ್ರಮ ಹಾಗೂ ಕಾನೂನು ಬಾಹಿರ ಚಟುವಟಿಕೆಗಳಲ್ಲಿ ಭಾಗಿಯಾಗಿ ಸಮಾಜಕ್ಕೆ ಕಂಟಕವಾಗುತ್ತಿದ್ದಾರೆ. ಹೀಗಾಗಿ ಪೊಲೀಸರು ಕ್ರಮ ಕೈಗೊಳ್ಳಲು ಮುಂದಾಗಿದ್ದಾರೆ.