ಕಲಬುರಗಿ : ಜಿಲ್ಲೆಯ ಚಿತ್ತಾಪುರ ಪಟ್ಟಣದಲ್ಲಿರುವ ನಾಗಾವಿ ಯಲ್ಲಮ್ಮ ದೇವಸ್ಥಾನದ ಹುಂಡಿ ಎಣಿಕೆ ವೇಳೆ ವಿದೇಶಿ ಕರೆನ್ಸಿ ಪತ್ತೆಯಾಗಿದೆ. ಹುಂಡಿಯಲ್ಲಿ ಮಲೇಷ್ಯಾದ 18 ನೋಟುಗಳು ಹಾಗೂ 2 ನಾಣ್ಯಗಳು ದೊರೆತಿದ್ದು, ಸ್ಥಳೀಯರಲ್ಲೂ ಕುತೂಹಲ ಮೂಡಿಸಿದೆ.
ರಾಷ್ಟ್ರಕೂಟರ ಕುಲದೇವತೆ ಎಂದೇ ಪ್ರಸಿದ್ಧಿಯಾಗಿರುವ ನಾಗಾವಿ ಯಲ್ಲಮ್ಮ ದೇವಿ ದೇವಸ್ಥಾನದಲ್ಲಿ ಸ್ವಯಂಸೇವಕರು ಹಾಗೂ ವಿವಿಧ ಇಲಾಖೆ ಸಿಬ್ಬಂದಿ ಸಮ್ಮುಖದಲ್ಲಿ ಹುಂಡಿ ಎಣಿಕೆ ನಡೆಸಲಾಯಿತು.
ಎಂಟು ತಿಂಗಳ ಅವಧಿಯಲ್ಲಿ ಒಟ್ಟು 14,73,160 ರೂ. ಹಣ ಸಂಗ್ರಹವಾಗಿದೆ ಎಂದು ದೇವಸ್ಥಾನ ಆಡಳಿತ ಮಂಡಳಿ ತಿಳಿಸಿದೆ. ದೇವಸ್ಥಾನ ಆಡಳಿತ ಮಂಡಳಿ ಅಧ್ಯಕ್ಷ ಹಾಗೂ ತಹಶೀಲ್ದಾರ್ ನಾಗಯ್ಯ ಹಿರೇಮಠ್ ನೇತೃತ್ವದಲ್ಲಿ ಹುಂಡಿ ಎಣಿಕೆ ಪ್ರಕ್ರಿಯೆ ನಡೆದಿತ್ತು. ದೇವಾಲಯದ ಅಭಿವೃದ್ಧಿ ಕಾರ್ಯಗಳಿಗೆ ಸಂಗ್ರಹವಾದ ಹಣವನ್ನು ಬಳಸಲಾಗುವುದು ಎಂದು ಆಡಳಿತ ಮಂಡಳಿ ಮಾಹಿತಿ ನೀಡಿದೆ.
ಇದನ್ನೂ ಓದಿ : ಡಿಡಿ ಚೆಕ್ ಮಾಡಿದ್ದಕ್ಕೆ ಪೊಲೀಸ್ ಬಳಿಯೇ ಕ್ಷಮೆ ಕೇಳಿಸಿದ ಮಹಿಳೆ | ವಿಡಿಯೋ ವೈರಲ್



















