ಗೋಕರ್ಣ: ಭಾತತೀಯ ಸಂಸ್ಕೃತಿಗೆ ಮಾರುಹೋದ ನಾರ್ವೇ ಜೋಡಿಯೊಂದು ಗೋಕರ್ಣದಲ್ಲಿ ವೈದಿಕ ಮದುವೆಯಾಗುವ ಮೂಲಕ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.
ಸ್ಯಾಮ್–ಆರ್ಟಿಮಾ ಗೋಕರ್ಣದ ಕುಡ್ಲೆ ಬೀಚ್ ರೆಸಾರ್ಟ್‌ನಲ್ಲಿ ಯಜ್ಞಕುಂಡದ ಸುತ್ತ ಸಪ್ತಪದಿ ತುಳಿದ ಜೋಡಿ, ವೈದಿಕ ಮಂತ್ರಗಳ ಮಧ್ಯೆ ವಿದೇಶಿ ವಧೂ-ವರರ ಮದುವೆ ವಿಧಿ ವಿಧಾನ ನಡೆದಿದೆ.

ಕೆಫೆ ಪ್ಯಾರಡೈಸ್ ಮಾಲೀಕ ಮುರಳಿ ಕಾಮತ್ ಅವರು ಈ ಮದುವೆ ಮುಂದಾಳತ್ವ ವಹಿಸಿಕೊಂಡು, ವಧು ವರರಿಗೆ ಆತಿಥ್ಯ ನೀಡಿದ್ದಾರೆ. ನವ ಜೋಡಿಗೆ ಪ್ರವಾಸಿಗರು–ಸ್ಥಳೀಯರು ಶುಭ ಹಾರೈಸಿದ್ದಾರೆ. ಸ್ಯಾಮ್ ವೃತ್ತಿಯಲ್ಲಿ ಪ್ರಮುಖ ಅಡುಗೆ ತಜ್ಞನಾಗಿದ್ದು, ಮದು ಮಾಡಿಕೊಳ್ಳುವ ಮೂಲಕ ನಾರ್ವೇ ಜೋಡಿ ಭಾರತೀಯ ಪರಂಪರೆಯನ್ನು ಅನುಭವಿಸಿದ್ದಾರೆ.
ಇದನ್ನೂ ಓದಿ: ಬೆಂಗಳೂರಿನಲ್ಲಿ ಐಟಿ ದಾಳಿ | 100 ಕೋಟಿ ರೂ. ಮೌಲ್ಯದ ಅಕ್ರಮ ವಹಿವಾಟು ಬಯಲು!



















