ಇತಿಹಾಸದಲ್ಲೇ ಮೊದಲ ಬಾರಿಗೆ ತುಂಗಭದ್ರಾ ಜಲಾಶಯಕ್ಕೆ ಸಿಎಂ ಸಿದ್ದರಾಮಯ್ಯ ಅವರು ಬಾಗಿನ ಅರ್ಪಿಸಿದ್ದಾರೆ.
ಮುಂಗಾರು ಮಳೆಗೆ ತುಂಗಭದ್ರಾ ಜಲಾಶಯ ಭರ್ತಿಯಾಗಿದ್ದು, ಬಾಗಿನ ಅರ್ಪಿಸಿದ್ದಾರೆ. ಕೊಪ್ಪಳ ತಾಲೂಕಿನ ಮುನಿರಾಬಾದ್ ಹತ್ತಿರ ತುಂಗಾಭದ್ರಾ ಜಲಾಶಯಕ್ಕೆ ಸಿಎಂ, ಡಿಸಿಎಂ, ಸಚಿವರು ಬಾಗಿನ ಅರ್ಪಿಸಿದ್ದಾರೆ.
ಗೇಟ್ ದುರಸ್ತಿಯಲ್ಲಿ ಯಶಸ್ವಿಯಾಗಿದ್ದ ಡ್ಯಾಮ್ ತಜ್ಞ ಕನ್ನಯ್ಯ ನಾಯ್ಡು ಸಹ ಈ ಬಾಗಿನ ಅರ್ಪಣೆ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಈ ತುಂಗಾಭದ್ರ ಡ್ಯಾಂಗೆ ಮುಖ್ಯಮಂತ್ರಿಯೊಬ್ಬರು ಬಾಗಿನ ಅರ್ಪಿಸಿದ್ದು, ಇದೇ ಮೊದಲು. ಈ ಹಿಂದೆಯೇ ಸಿಎಂ ಬಾಗಿನ ಅರ್ಪಿಸಬೇಕಿತ್ತು. ಆದರೆ, ಡ್ಯಾಂನ 19ನೇ ಕ್ರಸ್ಟ್ ಗೇಟ್ ಮುರಿದ ಹಿನ್ನೆಲೆಯಲ್ಲಿ ಅದು ರದ್ದಾಗಿತ್ತು. ಈಗ ಗೇಟ್ ರಿಪೇರಿಯಾಗಿ ಮತ್ತೆ ಜಲಾಶಯ ಭರ್ತಿಯಾಗಿದ್ದು, ಸಿಎಂ ಬಾಗಿನ ಅರ್ಪಿಸಿದ್ದಾರೆ.
ಈ ಸಂದರ್ಭದಲ್ಲಿ ತಂತ್ರಜ್ಞರು ಹಾಗೂ ಸಿಬ್ಬಂದಿಯನ್ನು ಸನ್ಮಾನಿಸಲಾಯಿತು. ಈ ವೇಳೆ ಮಾತನಾಡಿದ ಸಿಎಂ ಸಿದ್ದರಾಮಯ್ಯ, ಜಲಾಶಯ ಮತ್ತೆ ಭರ್ತಿಯಾಗುತ್ತದೆ. ನಾನು ಮತ್ತೆ ಬಂದು ಬಾಗಿನ ಅರ್ಪಿಸುತ್ತೇನೆ ಎಂದು ಹೇಳಿದ್ದಾರೆ.
ಡಿಸಿಎಂ ಡಿ ಕೆ ಶಿವಕುಮಾರ್, ಸಚಿವರಾದ ಶಿವರಾಜ ತಂಗಡಗಿ,ಜಮೀರ್ ಅಹ್ಮದ್ ಖಾನ್, ಶರಣಪ್ರಕಾಶ್ ಪಾಟೀಲ್ ಸೇರಿ ಅನೇಕ ಸಚಿವರು ಶಾಸಕರು ಭಾಗಿಯಾಗಿದ್ದರು.