ಕೋಲ್ಕತ್ತಾ : ಫುಟ್‌ಬಾಲ್ ಲೆಜೆಂಡ್, ಅರ್ಜೆಂಟೀನಾದ ಲಿಯೋನೆಲ್ ಮೆಸ್ಸಿ ಇಂದು ತಡರಾತ್ರಿ (ಡಿ.13) 1:30ಕ್ಕೆ ಭಾರತಕ್ಕೆ ಆಗಮಿಸಲಿದ್ದಾರೆ.
‘ಗೋಟ್ ಇಂಡಿಯಾ ಟೂರ್ 25’ ಹೆಸರಿನಲ್ಲಿ ಕೋಲ್ಕತ್ತಾಗೆ ಬರಲಿರುವ ಲಿಯೋನೆಲ್ ಮೆಸ್ಸಿ, 3 ದಿನಗಳ ಕಾಲ ಭಾರತದಲ್ಲಿ ಇರಲಿದ್ದಾರೆ. ಮೆಸ್ಸಿ ಜೊತೆಗೆ ಟೀಮ್‌ಮೇಟ್‌ಗಳಾದ ಲೂಯಿಸ್ ಸುರೇಜ್, ರೋಡ್ರಿಗೋ ಡಿಪೌಲ್ ಕೂಡ ಇರಲಿದ್ದಾರೆ.
ಶನಿವಾರ (ಡಿ.13) ಬೆಳಗ್ಗೆ ಕೋಲ್ಕತ್ತಾದ ಶ್ರೀಭೂಮಿ ಸ್ಫೋರ್ಟ್ ಕ್ಲಬ್‌ನಲ್ಲಿ ನಿರ್ಮಿಸಲಾಗಿರುವ ತನ್ನ 70 ಅಡಿ ಎತ್ತರದ ಪ್ರತಿಮೆಯನ್ನು ಅನಾವರಣ ಮಾಡಲಿದ್ದಾರೆ. ಈ ವೇಳೆ ಪಶ್ಚಿಮ ಬಂಗಾಳದ ಸಿಎಂ ಮಮತಾ ಬ್ಯಾನರ್ಜಿ, ಸೌರವ್ ಗಂಗೂಲಿ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿರಲಿದ್ದಾರೆ. ನಂತರ ಸಂಜೆ 7 ಗಂಟೆಗೆ ಹೈದ್ರಾಬಾದ್‌ನ ರಾಜೀವ್‌ಗಾಂಧಿ ಇಂಟರ್‌ನ್ಯಾಷನಲ್ ಮೈದಾನದಲ್ಲಿ ಒಂದು ಸೌಹಾರ್ದ ಪಂದ್ಯ, ಸಂಗೀತ ಕಾರ್ಯಕ್ರಮ ನಡೆಯಲಿದೆ.
ಡಿ.14ಕ್ಕೆ ಮುಂಬೈನಲ್ಲಿ ಸೆಲೆಬ್ರಿಟಿ ಫುಟ್‌ಬಾಲ್ ಪಂದ್ಯ ಇರಲಿದೆ. ಈ ವೇಳೆ ಸಚಿನ್, ಶಾರೂಕ್ ಸೇರಿದಂತೆ ಸೆಲೆಬ್ರಿಟಿಗಳು ಹಾಜರಾಗಲಿದ್ದಾರೆ. ಬಳಿಕ ಡಿ.15ಕ್ಕೆ ದೆಹಲಿಯಲ್ಲಿ ಪ್ರಧಾನಿ ಮೋದಿಯವರನ್ನು ಭೇಟಿಯಾಗಲಿದ್ದಾರೆ. ಅದೇ ದಿನ ಮಧ್ಯಾಹ್ನ ಜೇಟ್ಲಿ ಮೈದಾನದ ಕಾರ್ಯಕ್ರಮದಲ್ಲಿ ಭಾಗಿಯಾಗಿ, ನಂತರ ವಾಪಸ್ ತೆರಳಲಿದ್ದಾರೆ.
ಇದನ್ನೂ ಓದಿ : ಟೀಮ್ ಇಂಡಿಯಾ ಆಟಗಾರರಿಗೆ ದುಶ್ಚಟಗಳು ಹೆಚ್ಚು | ರವೀಂದ್ರ ಜಡೇಜಾ ಪತ್ನಿ ಶಾಕಿಂಗ್ ಹೇಳಿಕೆ



















