ತಿರುಪತಿ ಲಡ್ಡು ಪ್ರಸಾದಲ್ಲಿ ಪ್ರಾಣಿಗಳ ಕೊಬ್ಬು ಪತ್ತೆಯಾಗಿರುವ ವಿಷಯ ದೊಡ್ಡ ವಿವಾದಕ್ಕೆ ಕಾರಣವಾಗಿದೆ. ಈ ಮಧ್ಯೆ ಕರ್ನಾಟಕದಲ್ಲಿ ಕೂಡ ಎಚ್ಚೆತ್ತುಕೊಳ್ಳಲಾಗಿದೆ. ಮುಜರಾಯಿ ಇಲಾಖೆಯ ವ್ಯಾಪ್ತಿಯಲ್ಲಿನ ದೇವಸ್ಥಾನಗಳಲ್ಲಿ ನಂದಿನಿ ತುಪ್ಪವನ್ನೇ ಬಳಕೆ ಮಾಡಲು ಕಟ್ಟು ನಿಟ್ಟಾಗಿ ಸೂಚಿಸಲಾಗಿದೆ. ಈ ಮಧ್ಯೆ ಈಗ ಆಹಾರ ಇಲಾಖೆ ಬೇಕರಿಗಳ ಮೇಲೆ ಕೂಡ ಕಣ್ಣಿಟ್ಟಿದ್ದಾರೆ.
ಬೀದಿ ಬದಿ, ಬೇಕರಿಗಳಲ್ಲಿ ಸಿಗುವ ಸಿಹಿ ತಿಂಡಿಗಳ ಗುಣಮಟ್ಟದ ಬಗ್ಗೆ ಅನುಮಾನ ವ್ಯಕ್ತವಾಗುತ್ತಿದ್ದು, ರಾಜ್ಯದಲ್ಲಿ ಬೇಕರಿಗಳಲ್ಲಿ ಸಿಗುವ ಸಿಹಿ ತಿನಿಸುಗಳ ಪರಿಶೀಲನೆಗೆ ಆಹಾರ ಇಲಾಖೆ ಮುಂದಾಗಿದೆ.
ಪ್ರಸಾದವೇ ಇಷ್ಟೊಂದು ಗುಣಮಟ್ಟದ ವಿಷಯದಲ್ಲಿ ಹಿಂದುಳಿದರೆ, ಬೇಕರಿಗಳಲ್ಲಿ ಸಿಗುವ ಆಹಾರ ಪರಿಸ್ಥಿತಿ ಏನು? ಎಂಬ ಚರ್ಚೆ ಶುರುವಾಗಿದೆ. ಹೀಗಾಗಿ ಬೇಕರಿ ಆಹಾರ ಪರಿಶೀಲನೆಗೂ ಆಹಾರ ಇಲಾಖೆ ಮುಂದಾಗಿದೆ.
ರಾಜ್ಯದಲ್ಲಿ ಇದಕ್ಕೂ ಮುನ್ನ ಗೋಬಿ ಹಾಗೂ ಕಾಬಾಬ್ ತಯಾರಿಕೆಯಲ್ಲಿ ಆರೋಗ್ಯಕರವಲ್ಲದ ಕಲರ್ ಬಳಕೆ ಮಾಡುತ್ತಿರುವುದು ಪರೀಕ್ಷೆಯಿಂದ ದೃಢವಾಗಿತ್ತು. ಈಗ ಬೇಕರಿಗಳಲ್ಲಿ ಸಿಗುವ ಸಿಹಿ ತಿಂಡಿಗಳ ತಯಾರಿಕೆಯಲ್ಲಿ ಬಳಕೆ ಮಾಡುವ ಬಣ್ಣ ಹಾಗೂ ಪದಾರ್ಥಗಳು ಎಷ್ಟು ಆರೋಗ್ಯಕರವೆಂದು ಚರ್ಚೆ ಶುರುವಾಗಿದೆ.
ದಸರಾ ಹಾಗೂ ದೀಪಾವಳಿ ಹಬ್ಬಗಳಿಗೆ ಬೇಕರಿಗಳಲ್ಲಿ ಸಾಕಷ್ಟು ಸಿಹಿ ತಿಂಡಿಗಳನ್ನು ತಯಾರಿಸಲಾಗುತ್ತದೆ. ಸಿಹಿ ತಿಂಡಿಗಳಲ್ಲಿ ಕೃತಕ ಕಲರ್ ಬಳಕೆ ಮಾಡುವುದು ಆತಂಕವನ್ನು ಹೆಚ್ಚಿಸಿದೆ. ಹೀಗಾಗಿ ಆಹಾರ ಇಲಾಖೆ ಪರೀಕ್ಷೆಗೆ ಮುಂದಾಗಿದೆ.