ಬೆಂಗಳೂರು: ಫುಡ್ ಡೆಲಿವರಿ ಬಾಯ್ ಮೇಲೆ ನಡು ರಸ್ತೆಯಲ್ಲೇ ವ್ಯಕ್ತಿಯೊಬ್ಬ ಹಲ್ಲೆ ಮಾಡಿರುವ ಘಟನೆಯೊಂದು ವೈರಲ್ ಆಗುತ್ತಿದೆ. ಬೆಂಗಳೂರಿನ ವೈಟ್ ಫೀಲ್ಡ್ (Whitefield) ನಲ್ಲಿರುವ ರಾಮೇಶ್ವರಂ ಕೆಫೆ(Rameswaram Cafe) ಬಳಿ ಈ ದುರ್ಘಟನೆ ನಡೆದಿದೆ. ಟ್ರಾಫಿಕ್ ನಲ್ಲಿ ತೆರಳುತ್ತಿದ್ದ ಸಂದರ್ಭದಲ್ಲಿ ಡೆಲಿವರಿ ಬಾಯ್ ಅಡ್ಡ ಬಂದಿದ್ದಾರೆಂಬ ಕಾರಣಕ್ಕೆ ಬೈಕ್ ನಲ್ಲಿದ್ದ ವ್ಯಕ್ತಿ, ನಿಲ್ಲಿಸಿ ಹಲ್ಲೆ ಮಾಡಿದ್ದಾನೆ.
ಬೈಕ್ ಸವಾರ ಬಲವಂತವಾಗಿ ಸ್ವಿಗ್ಗಿ ಬಾಯ್ ನನ್ನು ರಸ್ತೆ ಬದಿಗೆ ಕರೆದೊಯ್ದು ಹಲ್ಲೆ ಮಾಡಿದ್ದಾನೆ. ಆ ವ್ಯಕ್ತಿಯ ದುರ್ವರ್ತನೆಯನ್ನು ಸ್ಥಳೀಯರು ಮೊಬೈಲ್ ನಲ್ಲಿ(mobile) ಸೆರೆ ಹಿಡಿದಿದ್ದಾರೆ. ಈ ವೇಳೆ ದೃಶ್ಯ ಸೆರೆ ಹಿಡಿಯುತ್ತಿದ್ದವರ ಮೇಲೆಯೂ ಕೊಲೆ ಬೆದರಿಕೆ ಹಾಕಿದ್ದಾನೆ. ವಾಹನ ಸಂಖ್ಯೆ KA 53 HD 7566 ರಲ್ಲಿ ಬಂದಿದ್ದ ವ್ಯಕ್ತಿಯಿಂದ ಹಲ್ಲೆ ನಡೆದಿದೆ ಎನ್ನಲಾಗಿದೆ.
ಕೆಲಸ ಮಾಡುವ ಸಂಧರ್ಭದಲ್ಲಿ ಇಂತಹ ಸವಾಲುಗಳನ್ನು ಎದುರಿಸುವ ಡೆಲಿವರಿ ಬಾಯ್ಸ್ ಗೆ ಉತ್ತಮ ರಕ್ಷಣೆ ನೀಡಿ ಎಂದು ಸ್ಥಳೀಯರು ಈ ಮೂಲಕ ಆಗ್ರಹಿಸಿದ್ದಾರೆ. ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ(social media.) ಭಾರೀ ವೈರಲ್ ಆಗುತ್ತಿದೆ.