ವಾಕಿಂಗ್ ಮಾಡುವುದರಿಂದ ತೂಕ ನಷ್ಟದ ಜೊತೆಗೆ ಅನೇಕ ಪ್ರಯೋಜನಗಳನ್ನು ಪಡೆದುಕೊಳ್ಳಬಹುದಾಗಿದೆ. ಜನರು ಆರೋಗ್ಯ ಮತ್ತು ತೂಕ ನಷ್ಟದ ಬಗ್ಗೆ ಯೋಚಿಸಿದಾಗ ಸಾಮಾನ್ಯವಾಗಿ ಕಠಿಣ ವ್ಯಾಯಾಮ ಮತ್ತು ಕಟ್ಟುನಿಟ್ಟಾದ ಆಹಾರ ಕ್ರಮಗಳನ್ನು ಹುಡುಕುತ್ತಾರೆ. ಆದರೆ ದೈನಂದಿನ ಜೀವನದಲ್ಲಿ ಸರಳವಾದ ವಾಕಿಂಗ್ ದಿನಚರಿಯನ್ನು ಪಾಲಿಸುವುದರಿಂದ ಹಲವಾರು ಆರೋಗ್ಯಕರವಾದ ಪ್ರಯೋಜನೆಗಳನ್ನು ಪಡೆಯಬಹುದಾಗಿದೆ.
ಉತ್ತಮವಾದ ಆರೋಗ್ಯ ಮತ್ತು ಫಿಟ್ನೆಸ್ ಕಾಪಡಿಕೊಳ್ಳಲು “6-6-6” ವಿಧಾನವನ್ನು ಅನುಸರಿಸಬೇಕು.
“6-6 -6 ವಾಕಿಂಗ್ ದಿನಚರಿ ಎಂದರೇನು ?”
6-6 -6 ವಾಕಿಂಗ್ ದಿನಚರಿಯು ಫಿಟ್ ಆಗಿರಲು ಸರಳವಾದ ಒಂದು ವಿಧಾನವಾಗಿದ್ದು,ಇದರರ್ಥ ಬೆಳಿಗ್ಗೆ 6 ಅಥಾವ ಸಂಜೆ 6 ಗಂಟೆಗೆ 60 ನಿಮಿಷಗಳ ಕಾಲ ನಡೆಯುವುದು. “ನಡಿಗೆಯ ಪ್ರಯೋಜನಗಳನ್ನು ಇನ್ನಷ್ಟು ಹೆಚ್ಚಿಸಲು ಮೊದಲು 6 ನಿಮಿಷ ವಾಕ್ ಮಾಡಿ 6 ನಿಮಿಷ ವಿಶ್ರಾಂತಿ ಪಡೆಯಬೇಕು ಎಂದು ಫಿಟ್ ನೆಸ್ ತಜ್ಞರು ಹೇಳುತ್ತಾರೆ. ಈ ಅಭ್ಯಾಸದ ಅವಧಿಯಲ್ಲಿ ಹಗುರವಾದ ವ್ಯಾಯಾಮಗಳಾದ ಆರ್ಮ್ ಸರ್ಕಲ್‌ಗಳು, ಕತ್ತಿನ ವ್ಯಾಯಾಮಗಳು ಮಾಡುವುದರಿಂದ ದೇಹವನ್ನು ಆರೋಗ್ಯಕರವಾಗಿಡಲು ಸಹಾಯ ಮಾಡುತ್ತದೆ.
“6-6 -6” ವಾಕಿಂಗ್ ದಿನಚರಿಯನ್ನು ಹೇಗೆ ಅನುಸರಿಸುವುದು ?”

- ಬೆಳಿಗ್ಗೆ 6 ಗಂಟೆಯ ನಡಿಗೆಯೊಂದಿಗೆ ಪ್ರಾರಂಭಿಸಿ
ಬೆಳಗ್ಗೆ 6 ಗಂಟೆಗೆ ನಡೆಯುವುದರಿಂದ ದೈಹಕ ಮತ್ತು ಮಾನಸಿಕ ಆರೋಗ್ಯಕ್ಕೆ ಹಲವಾರು ಪ್ರಯೋಜನಗಳು ಸಿಗುತ್ತವೆ. ಚಯಾಪಚಯವನ್ನು ಹೆಚ್ಚಿಸಲು ಇದೊಂದು ಮಾರ್ಗವಾಗಿದ್ದು, ದಿನವಿಡೀ ಹೆಚ್ಚು ಪರಿಣಾಮಾಕಾರಿಯಾಗಿ ಕ್ಯಾಲೊರಿಗಳನ್ನು ಬರ್ನ್ ಮಾಡಲು ಅನುವು ಮಾಡಿಕೊಡುತ್ತದೆ. ಬೆಳಗಿನ ನಡಿಗೆಯು ಶುದ್ದ ಗಾಳಿಯನ್ನು ತೆಗೆದುಕೊಳ್ಳಲು ಅನುಕೂಲವಾಗುತ್ತದೆ. ಹಾಗೂ ಶ್ವಾಸಕೋಶದ ಕಾರ್ಯವನ್ನು ಮತ್ತು ಸಾಮಾನ್ಯ ಉಸಿರಾಟದ ಆರೋಗ್ಯವನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ಜೊತೆಗೆ ಮುಂಜಾನೆಯ ಶಾಂತ ವಾತಾವರಣವು ಮಾನಸಿಕ ಒತ್ತಡ ಮತ್ತು ಆತಂಕವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. - ಸಂಜೆಯ 6 ಗಂಟೆಯ ನಡಿಗೆ
ಸಂಜೆ 6 ಗಂಟೆಗೆ ನಡೆಯುವುದರಿಂದ ಅನೇಕ ಆರೋಗ್ಯ ಪ್ರಯೋಜನಗಳನ್ನು ಒದಗಿಸುತ್ತದೆ. ವಿಶೇಷವಾಗಿ ಮೇಜಿನ ಮುಂದೆ ಕುಳಿತು ದಿನವನ್ನು ಕಳೆಯುವ ಜನರಿಗೆ ದಿನವಿಡಿ ಉಂಟಾಗುವ ದೈಹಿಕ ಮತ್ತು ಮಾನಸಿಕ ಒತ್ತಡವನ್ನು ನಿವಾರಿಸಲು ಇದು ಸಹಾಯ ಮಾಡುತ್ತದೆ. ಚುರುಕಾದ ಸಂಜೆಯ ನಡಿಗೆಯು ಜೀರ್ಣ ಕ್ರೀಯೆಯನ್ನು ಸುಧಾರಿಸುತ್ತದೆ. ಹೊಟ್ಟೆ ಉಬ್ಬುವಿಕೆಯನ್ನು ಕಡಿಮೆ ಮಾಡುವುದು, ನಿದ್ರೆಯ ಗುಣಮಟ್ಟವನ್ನು ಹೆಚ್ಚಿಸುವುದರ ಜೊತೆಗೆ ರಕ್ತದೊತ್ತಡ ಮತ್ತು ಆತಂಕವನ್ನು ನಿವಾರಿಸುತ್ತದೆ. - ದಿನಕ್ಕೆ 60 ನಿಮಿಷ ಕಾಲ ನಡೆಯಿರಿ
60 ನಿಮಿಷ ಕಾಲ ವಾಕಿಂಗ್ ಮಾಡುವುದರಿಂದ ಹೃದಯ ಸಂಬಂಧಿ ಕಾಯಿಲೆಯ ಜೊತೆಗೆ ರಕ್ತದೊತ್ತಡ ಕಡಿಮೆ ಮಾಡುತ್ತದೆ. ನಿಯಮಿತವಾದ ವೇಗದ ನಡಿಗೆ ತೂಕ ನಿರ್ವಹಣಗೆ ಸಹಾಯ ಮಾಡುತ್ತದೆ. ದಿನಕ್ಕೆ ಒಂದು ಗಂಟೆ ನಡೆಯುವುದರಿಂದ ಜ್ಞಾಪಕ ಶಕ್ತಿ ವೃದ್ದಿಯಾಗುತ್ತದೆ. - 6 ನಿಮಿಷಗಳ ಕಾಲ ಬೆಚ್ಚಗಾಗಲು
ವ್ಯಾಯಾನದ ಮೊದಲು ಬೆಚ್ಚಗಾಗುವುದು ಹಲವಾರು ಕಾರಣಗಳಿಗೆ ಮುಖ್ಯವಾಗುದೆ. ಇದು ಕ್ರಮೇಣ ನಿಮ್ಮ ಹೃದಯ ಬಡಿತ, ಉಸಿರಾಟದ ದರ ಮತ್ತು ದೇಹದ ಉಷ್ಣತೆಯನ್ನು ಹೆಚ್ಚಿಸುತ್ತದೆ. ಹಾಗೂ ತೀವ್ರವಾದ ಜೀವನ ಕ್ರಮಕ್ಕೆ ನಿಮ್ಮನ್ನು ಸಿದ್ದಪಡಿದುತ್ತದೆ. - 6 ನಿಮಿಷಗಳ ಕಾಲ ವಿಶ್ರಾಂತಿ
ಒಂದು ಸಣ್ಣ ನಡಿಗೆಯ ನಂತರ 6 ನಿಮಿಷಗಳ ಕಾಲ ವಿಶ್ರಾಂತಿ ಮಾಡುವುದು ಒಟ್ಟಾರೆ ಆರೋಗ್ಯಕ್ಕೆ ಅವಶ್ಯಕವಾಗಿದೆ. ಇದು ದೇಹವನ್ನು ವಿಶ್ರಾಂತಿಯ ಸ್ಥಿತಿಗೆ ನಿಧಾನವಾಗಿ ಪರಿವರ್ತಿಸಲು ಸಹಾಯ ಮಾಡುತ್ತದೆ.
“6-6-6” ನಿಯಮದ ಗರಿಷ್ಟ ಪ್ರಯೋಜನಗಳನ್ನು ಪಡೆಯಲು ಸ್ಥಿರತೆಯು ಪ್ರಮುಖವಾಗಿದೆ. ಯಾವುದೇ ವಿಶೇಷ ಉಪಕರಣ ಮತ್ತು ಜೀಮ್ ನ ಅಗತ್ಯವಿಲ್ಲದೆ ಮಾನಸಿಕ ಆರೋಗ್ಯ ಮತ್ತು ಶಕ್ತಿಯ ಮಟ್ಟವನ್ನು ಹೆಚ್ಚಿಸಿಕೊಳ್ಳಲು ಇದೊಂದು ಸರಳ ಅತ್ಯುತ್ತಮ ವಿಧಾನವಾಗಿದೆ.




















