ಬೆಂಗಳೂರು : ಸ್ವಾತಂತ್ರ್ಯ ದಿನಾಚರಣೆ ಹತ್ತಿರವಾಗುತ್ತಿದ್ದಂತೆ ಸಿಲಿಕಾನ್ ಸಿಟಿಯ ಲಾಲ್ ಬಾಗ್ ಹೊಸ ವೈಭವಕ್ಕೆ ತಿರುಗಿದೆ. ಸಸ್ಯಕಾಶಿಯಲ್ಲಿ ಪುಷ್ಪಲೋಕವೇ ಧರೆಗಿಳಿದಿದೆ.
ಇಂದಿನಿಂದ ಆರಂಭಗೊಳ್ಳುತ್ತಿರುವ ಲಾಲ್ ಬಾಗ್ ಫಲಪುಷ್ಪ ಪ್ರದರ್ಶನಕ್ಕೆ ಸಿಎಂ ಸಿದ್ದರಾಮಯ್ಯ ಚಾಲನೆ ನೀಡಿದರು.

ಈ ಸಂದರ್ಭದಲ್ಲಿ, ಸಾರಿಗೆ ಸಚಿವ ರಾಮಲಿಂಗರೆಡ್ಡಿ, ತೋಟಗಾರಿಕೆ ಇಲಾಖೆ ಸಚಿವ ಎಸ್. ಎಸ್. ಮಲ್ಲಿಕಾರ್ಜುನ್, ಸ್ಥಳೀಯ ಶಾಸಕ ಉದಯ್ ಗರುಡಾಚಾರ್, ವಚನಾನಂದ ಸ್ವಾಮೀಜಿ ಸೇರಿ ಪ್ರಮುಖರು ಸಿಎಂ ಜೊತೆಗೆ ಸಾಥ್ ಫಲಪುಷ್ಪ ಪ್ರದರ್ಶನವನ್ನು ವೀಕ್ಷಣೆಗೆ ಸಾಥ್ ನೀಡಿದರು.

ಇನ್ನು, ಫಲಪುಷ್ಪ ಪ್ರದರ್ಶನ 12 ದಿನಗಳ ಕಾಲ ನಡೆಯಲಿದೆ. ವೀರವನಿತೆ ಕಿತ್ತೂರು ರಾಣಿ, ಸಂಗೋಳ್ಳಿ ರಾಯಣ್ಣ ಅವರ ಕಿತ್ತೂರಿನ ವೀರ ಪರಂಪರೆಯನ್ನೇ ಲಾಲ್ ಬಾಗ್ ನಲ್ಲಿ ಅನಾವರಣಗೊಳಿಸಲಾಗಿದೆ.

12 ದಿನಗಳ ಪ್ರದರ್ಶನಕ್ಕೆ 10 ಲಕ್ಷಕ್ಕೂ ಅಧಿಕ ಮಂದಿ ಸಾಕ್ಷಿಯಾಗುವ ನಿರೀಕ್ಷೆ ಇದೆ. ಕಿತ್ತೂರು ಸಂಸ್ಥಾನದ ಕೋಟೆಯ ಪ್ರಾತಿನಿಧಿಕ ಪುಷ್ಪ ಮಾದರಿ, ರಾಣಿ ಚೆನ್ನಮ್ಮ ಮತ್ತು ರಾಯಣ್ಣನ ಪ್ರತಿಮೆಗಳು, ಕೋಟೆ ವಿನ್ಯಾಸದ ವರ್ಟಿಕಲ್ ಗಾರ್ಡನ್, ರಾಯಣ್ಣ ಹುತಾತ್ಮರಾದ ಸನ್ನಿವೇಶದ ಪ್ರದರ್ಶನ, ಹೂ ಜೋಡಣೆ ನಡುವೆ ವೀರವನಿತೆಯರ ಕಲಾಕೃತಿಗಳು ಎಲ್ಲರನ್ನೂ ಕೈ ಬೀಸಿ ಕರೆಯಲಿವೆ. 109 ಪ್ರಬೇಧದ 30 ಲಕ್ಷಕ್ಕೂ ಹೆಚ್ಚು ಹೂಗಳನ್ನು ಬಳಸಲಾಗುತ್ತಿದೆ.



















