ಕಲಬುರಗಿ : ಕಲಬುರ್ಗಿ ನಗರದ ರಾಮತೀರ್ಥ ದೇವಸ್ಥಾನನಲ್ಲಿ ನಡೆದ ಘಟನೆ ಗಂಭೀರ ವಿವಾದಕ್ಕೆ ಕಾರಣವಾಗಿದೆ. ಶಿವರಾತ್ರಿ ಹಿನ್ನಲೆ, ದೇವಸ್ಥಾನದ ಶಿವಲಿಂಗಕ್ಕೆ ಕೆಲ ಅನ್ಯ ಕೋಮಿನ ವ್ಯಕ್ತಿಗಳು ಹೂವಿನ ಅಲಂಕಾರ ಮಾಡಲಾಗಿದೆ ಎಂದು ಆರೋಪಿಸಲಾಗಿದೆ.
ಘಟನೆಯನ್ನು ಖಂಡಿಸಿ ಹಿಂದೂ ಜಾಗೃತಿ ಸೇನೆ ಕಾರ್ಯಕರ್ತರು ಶಿವಲಿಂಗವನ್ನು ಗೊಮೂತ್ರದಿಂದ ಶುದ್ಧೀಕರಣ ಮಾಡುವ ಕಾರ್ಯ ನಡೆಸಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ದೇವಸ್ಥಾನದ ಆಡಳಿತ ಮಂಡಳಿ ಭಾರೀ ವಿರೋಧ ವ್ಯಕ್ತಪಡಿಸಿದೆ.
ದೇಶೀಯ ಹಾಗೂ ಧಾರ್ಮಿಕ ಸಮುದಾಯಗಳಲ್ಲಿ ಈ ಘಟನೆಗೆ ವಿರೋಧ ವ್ಯಕ್ತವಾಗಿದ್ದು, ಸ್ಥಳೀಯ ಪೊಲೀಸ್ ಮತ್ತು ಆಡಳಿತಾತ್ಮಕ ಅಧಿಕಾರಿಗಳು ಪರಿಸ್ಥಿತಿಯನ್ನು ಶಾಂತಿಪೂರ್ಣವಾಗಿ ನಿರ್ವಹಿಸಲು ಗಮನ ಹರಿಸಿದ್ದಾರೆ.
ಇದನ್ನೂ ಓದಿ : ಮುಳ್ಳು ಗದ್ದುಗೆ ಮೇಲೆ ನರ್ತನ | ರಾಮಲಿಂಗೇಶ್ವರ ಸ್ವಾಮೀಜಿ ಪವಾಡಕ್ಕೆಆಶ್ಚರ್ಯರಾದ ಅಪಾರ ಭಕ್ತಗಣ!



















