ಅಫ್ಘಾನಿಸ್ತಾನ : ಪಾಕಿಸ್ತಾನಕ್ಕೆ ಮತ್ತೊಂದು ಜಲಘಾತ ಬಾಗಿಲಲ್ಲಿ ಬಂದು ನಿಂತಿದೆ. ಇದೀಗ ಭಾರತದಂತೆ ಅಫ್ಘಾನ್ ಕೂಡ ನದಿನೀರಿನ ಹರಿವು ಪಾಕಿಸ್ತಾನಕ್ಕೆ ತಡೆಹಿಡಿಯುವ ನಿರ್ಧಾರ ಕೈಗೊಂಡಿದೆ. ಇದರಿಂದ ಪಾಕಿಸ್ತಾನಕ್ಕೆ ನೀರಿನ ಆರ್ಥಿಕ ಸಂಕಷ್ಟ ಎದುರಾಗಿದೆ. ಒಂದು ಹೊತ್ತಿನ ಊಟಕ್ಕೂ ಪರದಾಡುವ ಸ್ಥಿತಿ ಇನ್ನೇನು ಹತ್ತರದಲ್ಲಿದೆ.
ಪಾಕಿಸ್ತಾನಕ್ಕೆ ಬುದ್ಧಿ ಕಲಿಸಲು ಭಾರತ ಪ್ರಯೋಸಿದ ತಂತ್ರವನ್ನೇ ಈಗ ಅಫ್ಘಾನಿಸ್ಥಾನವೂ ಬಳಸಲು ಯೋಜಿಸಿದೆ. ಪಾಕಿಸ್ತಾನಕ್ಕೆ ಜೀವನಾಡಿಯಂತೆ ಹರಿಯುವ ನದಿಗಳ ಮೂಲವು ಅಫ್ಘಾನಿಸ್ತಾನ ಮತ್ತು ಭಾರತದಲ್ಲಿದೆ. ಈ ಎರಡು ಕಡೆಯಿಂದ ನದಿ ಹರಿಯುವಿಕೆ ನಿಂತರೆ ಪಾಕ್ ಜಲಕಂಟಕ ಎದುರಾಗುವುದಂತೂ ಸತ್ಯ. ಅಂತೆಯೇ ಅಫ್ಘಾನಿಸ್ತಾನವು ಕುನಾರ್ ನದಿಗೆ ತಡೆಯೊಡ್ಡಿ ಪಾಕ್‌ಗೆ ನೀರಿನ ಹರಿವು ತಡೆ ಹಿಡಿಯಲು ಮುಂದಾಗಿದೆ.
ಅ.15ರ ರಾತ್ರಿ ಪಾಕ್-ಅಫ್ಘಾನ್ ಗಡಿಯಲ್ಲಿ ಸಂಘರ್ಷ ಏರ್ಪಟ್ಟಿತ್ತು. ಪಾಕಿಸ್ತಾನವು ತೆಹ್ರೀಕ್-ಎ-ತಾಲಿಬಾನ್ ಸಂಘಟನೆಗೆ ನಿಷೇಧ ಹೇರಿದ್ದು, ಅಫ್ಘಾನ್ ನಿರಾಶ್ರಿತರನ್ನು ಗಡಿಪಾರು ಮಾಡುವುದಾಗಿ ಹೇಳಿಕೆ ನೀಡಿತ್ತು, ತನ್ನ ಆಡಳಿತದಲ್ಲಿ ಹಸ್ತಕ್ಷೇಪ ಮಾಡಲು ಯತ್ನಿಸುತ್ತಿರುವುದು ಸೇರಿ ಹಲವು ನಡೆಗಳಿಂದ ಕೆರಳಿದ ಅಫ್ಘಾನಿಸ್ಥಾನ, ಈಗ ನದಿ ನೀರಿನ ಹರಿವಿಗೆ ತಡೆ ಹಾಕಲು ಆಣೆಕಟ್ಟು ನಿರ್ಮಿಸುವುದಾಗಿ ತಿಳಿಸಿದೆ.
ತಾಲಿಬಾನ್‌ನ ಸರ್ವೋಚ್ಚ ನಾಯಕ ಮೌಲ್ವಿ ಹಿಬತ್ ಉಲ್ಲಾ ಅಖುಂದಜಾದಾ, ಕುನಾರ್ ನದಿಗೆ ಶೀಘ್ರವೇ ಅಣೆಕಟ್ಟು ನಿರ್ಮಿಸಬೇಕೆಂದು ಆದೇಶಿಸಿದ್ದಾರೆ ಎಂದು ತಾಲಿಬಾನ್ ಸರ್ಕಾರದ ಜಲಸಂಪನ್ಮೂಲ ಖಾತೆಯ ಹಂಗಾಮಿ ಸಚಿವ ಮುಲ್ಲಾ ಅಬ್ದುಲ್ ಲತೀಫ್ ಮಾನ್ಸೂರ್ ಟ್ವೀಟರ್‌ನಲ್ಲಿ ತಿಳಿಸಿದ್ದಾರೆ. “ಅಫ್ಘನ್ನರಿಗೆ ತಮ್ಮ ನೀರನ್ನು ತಾವೇ ನಿರ್ವಹಿಸುವ ಹಕ್ಕಿದೆ. ನಮ್ಮ ಜನರ ಅಗತ್ಯತೆ ಮೊದಲು. ನಮ್ಮ ಭೂಮಿಗೆ ಬೇಕಾದ ನೀರು ಮೊದಲು, ಉಳಿದಿದ್ದು ಮಾತ್ರ ಹೊರಗೆ ಹರಿಯುತ್ತದೆ. ಹೀಗಾಗಿ ಈ ನದಿ ಪಾತ್ರದ ಯಾವುದೇ ನಿರ್ಮಾಣ ಕಾರ್ಯಗಳನ್ನು ವಿದೇಶಿ ಸಂಸ್ಥೆಗಳ ಬದಲಿಗೆ ದೇಶೀಯ ಸಂಸ್ಥೆಗಳೇ ಮುನ್ನಡೆಸಲಿವೆ’ ಎಂದಿದ್ದಾರೆ. ಈ ಮೂಲಕ ತನ್ನ ದೇಶದ ನದಿ ಪಾತ್ರದಲ್ಲಿ ಶೀಘ್ರವೇ ಹಲವು ಅಣೆಕಟ್ಟುಗಳನ್ನು ನಿರ್ಮಿಸುವ ಮೂಲಕ ಪಾಕ್‌ಗೆ ನೀರಿನ ಹರಿವು ತಡೆಯುವ ಸುಳಿವನ್ನು ಲತೀಫ್ ನೀಡಿದ್ದಾರೆ.
ಈ ಹಿಂದೆ 1960ರಲ್ಲಿ ಭಾರತ ಮತ್ತು ಪಾಕಿಸ್ತಾನ ನಡುವೆ ವಿಶ್ವಸಂಸಂಸ್ಥೆ ಮಧ್ಯಸ್ಥಿಕೆಯಲ್ಲಿ ಸಿಂಧು ನದಿ ಒಪ್ಪಂದಕ್ಕೆ ಸಹಿಹಾಕಿದ್ದವು. ಹಾಗೇಯೇ ನಡೆದುಕೊಂಡರೂ ಸಹ ಪಾಕ್‌ನ ಪದೇಪದೇ ದಾಳಿಯಿಂದ ಈ ಒಪ್ಪಂದ ಮರು ಪರೀಶೀಲಿಸಲು ಭಾರತ ವಿಶ್ವಸಂಸ್ಥೆಗೆ ಮನವಿ ಮಾಡಿತ್ತು. ಅಂತೆಯೇ 2025ರ ಏಪ್ರಿಲ್‌ನಲ್ಲಿ ಪಹಲ್ಗಾಮ್ ಯುದ್ದದಲ್ಲಿ ಉಗ್ರರ ದಾಳಿಯಿಂದಾಗಿ ಭಾರತ ಸಿಂಧು ನದಿಯ ಭಾಗಶಃ ಹರಿವು ತಡೆಹಿಡಿಯುವ ನಿರ್ಧಾರ ಕೈಗೊಂಡಿತ್ತು. ಜಮ್ಮು–ಕಾಶ್ಮೀರದಲ್ಲಿನ ಕಿಷನ್‌ಗಂಗಾ ಮತ್ತು ಪಕಲ್ ದುಲ್ ಹೈಡ್ರೋ ಪವರ್ ಯೋಜನೆಗಳ ಮೂಲಕ ನೀರನ್ನು ಭಾರತದಲ್ಲೇ ಬಳಸುವಂತೆ ಮಾಡಲಾಗಿತ್ತು. ಇದರಿಂದ ಪಾಕ್ ಗೆ ತಕ್ಕ ಪಾಠ ಕಲಿಸಿದ ಭಾರತ ಇದೀಗ ಆಫ್ಗಾನ್ ಕೂಡ ಇದೇ ಹಾದಿ ಹಿಡಿದಿದೆ.
ಪಾಕಿಸ್ತಾನದ ಶೇ.60% ಕೃಷಿ ಭಾಗವೂ ಭಾರತದ ಸಿಂಧೂ ನದಿ ಮತ್ತು ಅಫ್ಘಾನಿಸ್ತಾನದ ಕಾಬುಲ್ ಮತ್ತು ಹೆಲ್ಮಂಡ್ ನದಿಗಳ ಮೇಲೆ ಅವಲಂಬಿತವಾಗಿದೆ. ಹೀಗಾಗಿ, ಈ ನದಿಗಳ ಹರಿವು ತಡೆದರೆ ಪಾಕಿಸ್ತಾನದ ಆಹಾರ ಭದ್ರತೆ, ಆರ್ಥಿಕತೆ, ವಿದ್ಯೂತ್ ಉತ್ಪನ್ನ ಮತ್ತು ಕೃಷಿ ವ್ಯವಸ್ಥೆ ಕುಸಿಯುವುದಂತೂ ಖಂಡಿತ. ಇನ್ನೇನು ಸಮಾಧಾನಕರ ನೀರಿನ ಹರಿವು ಕಾಪಾಡಲು ಪಾಕಿಸ್ತಾನ ಮೊದಲು ತನ್ನ ರಾಜತಾಂತ್ರಿಕ ನಡವಳಿಕೆ ಬದಲಿಸಬೇಕು ಅಷ್ಟೇ.



















