ಬೆಂಗಳೂರು : 2025 ಚಾಂಪಿಯನ್ಸ್ ಟ್ರೋಫಿ (Chanmpions Trophy 2025) ಮುಂದಿನ ವಾರ ಕರಾಚಿಯಲ್ಲಿ ಆರಂಭವಾಗಲಿದೆ, ಇದರಲ್ಲಿ ಜಗತ್ತಿನ ಅಗ್ರ 8 ತಂಡಗಳು ಪ್ರಶಸ್ತಿ ಗೆಲ್ಲಲು ತೀವ್ರ ಸ್ಪರ್ಧೆ ನಡೆಸಲಿವೆ. 2017ರಲ್ಲಿ ಇಂಗ್ಲೆಂಡಿನಲ್ಲಿ ನಡೆದ ಕೊನೆಯ ಆವೃತ್ತಿಯಲ್ಲಿ ಪಾಕಿಸ್ತಾನವು ಭಾರತವನ್ನು ಫೈನಲ್‌ನಲ್ಲಿ ಸೋಲಿಸಿ ಪ್ರಶಸ್ತಿ ಗೆದ್ದಿತ್ತು. ಹಾಲಿ ಟೂರ್ನಮೆಂಟ್‌ನಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್‌ನ ಅತ್ಯುತ್ತಮ ಬ್ಯಾಟ್ಸ್‌ಮನ್‌ಗಳು ಭಾಗವಹಿಸಲಿದ್ದು, ಭಾರೀ ರನ್‌ಗಳ ಸುರಿಮಳೆಯಾಗುವ ನಿರೀಕ್ಷೆ ಇದೆ. ಅಂತೆಯೇ ಟೂರ್ನಮೆಂಟ್‌ನಲ್ಲಿ ದೊಡ್ಡ ಪರಿಣಾಮ ಬೀರುವ 5 ಪ್ರಮುಖ ಬ್ಯಾಟ್ಸ್‌ಮನ್‌ಗಳು ಯಾರೆಂಬುದನ್ನು ನೋಡೋಣ.
1. ರೋಹಿತ್ ಶರ್ಮಾ
ರೋಹಿತ್ ಶರ್ಮಾ ಏಕದಿನ ಕ್ರಿಕೆಟ್ ಇತಿಹಾಸದ ಅತ್ಯುತ್ತಮ ಆರಂಭಿಕ ಬ್ಯಾಟ್ಸ್‌ಮನ್‌ಗಳಲ್ಲಿ ಒಬ್ಬರು. 259 ಇನ್ನಿಂಗ್ಸ್‌ಗಳಲ್ಲಿ 10,987 ರನ್‌ಗಳನ್ನು 49.26 ಸರಾಸರಿ ಮತ್ತು 92.7 ಸ್ಟ್ರೈಕ್ ರೇಟ್‌ನಲ್ಲಿ ದಾಖಲಿಸಿದ್ದಾರೆ. ಅವರ 32 ಶತಕಗಳನ್ನು ಬಾರಿಸಿದ್ದಾರೆ. ವಿರಾಟ್ ಕೊಹ್ಲಿ ಮತ್ತು ಸಚಿನ್ ತೆಂಡೂಲ್ಕರ್ ನಂತರ ತೃತೀಯ ಸ್ಥಾನದಲ್ಲಿವೆ.
ರೋಹಿತ್ ಏಕದಿನ ಕ್ರಿಕೆಟ್‌ನಲ್ಲಿ 3 ದ್ವಿಶತಕ ಗಳಿಸಿರುವ ಏಕೈಕ ಆಟಗಾರ. 2014ರಲ್ಲಿ ಶ್ರೀಲಂಕಾವಿನ ವಿರುದ್ಧ ಈಡನ್ ಗಾರ್ಡನ್ಸ್‌ನಲ್ಲಿ 264 ರನ್ ಬಾರಿಸಿ ವಿಶ್ವ ದಾಖಲೆ ಬರೆದಿದ್ದಾರೆ.
ಅವರು ಭಾರತ ತಂಡವನ್ನು ಆಕ್ರಮಣಕಾರಿ ನೀತಿಯೊಂದಿಗೆ ಮುನ್ನಡೆಸುತ್ತಿದ್ದು, 2023 ವಿಶ್ವಕಪ್‌ನಲ್ಲಿ 597 ರನ್ ಗಳಿಸಿದ್ದರು. 2019 ವಿಶ್ವಕಪ್‌ನಲ್ಲಿ 648 ರನ್ ಗಳಿಸಿದ್ದರು, ಇದರಲ್ಲಿ 5 ಶತಕಗಳಿದ್ದವು!
2. ಬಾಬರ್ ಅಜಂ
ಬಾಬರ್ ಅಜಂ ಈ ಶತಮಾನದ ಶ್ರೇಷ್ಠ ಆಟಗಾರರಲ್ಲಿ ಒಬ್ಬರು ಮತ್ತು ಏಕದಿನ ಕ್ರಿಕೆಟ್‌ನಲ್ಲಿ ಅತಿ ಹೆಚ್ಚಿನ ಸರಾಸರಿಯನ್ನು (56.29) ಹೊಂದಿರುವವರು. ಅವರು ಪಾಕಿಸ್ತಾನದಲ್ಲಿ 70.5 ಸರಾಸರಿಯೊಂದಿಗೆ 7 ಶತಕಗಳೊಂದಿಗೆ 1481 ರನ್ ಗಳಿಸಿದ್ದಾರೆ.
ದುಬೈನಲ್ಲೂ ಉತ್ತಮ ಸಾಧನೆ ಮಾಡಿರುವ ಬಾಬರ್, ಸ್ಪಿನ್ ವಿರುದ್ಧ ಉತ್ತಮ ಆಟಗಾರ. 70.5 ಸರಾಸರಿ ಮತ್ತು ಉತ್ತಮ ಸ್ಟ್ರೈಕ್ ರೇಟ್ ಹೊಂದಿರುವ ಅವರು ಚಾಂಪಿಯನ್ಸ್ ಟ್ರೋಫಿಯಲ್ಲಿ ಪಾಕಿಸ್ತಾನ ಪರ ಪ್ರಮುಖ ಪಾತ್ರ ವಹಿಸಬಹುದು.
3. ಡ್ಯಾರಿಲ್ ಮಿಚೆಲ್
ಡ್ಯಾರಿಲ್ ಮಿಚೆಲ್ ಅವರ ಏಕದಿನ ಕ್ರಿಕೆಟ್ ಪ್ರಾರಂಭ ಅತ್ಯಂತ ಸ್ಫೋಟಕವಾಗಿದೆ. 39 ಇನ್ನಿಂಗ್ಸ್‌ನಲ್ಲಿ 1708 ರನ್ ಗಳಿಸಿದ್ದು, 50.23 ಸರಾಸರಿ ಮತ್ತು 97.87 ಸ್ಟ್ರೈಕ್ ರೇಟ್ ಹೊಂದಿದ್ದಾರೆ. 6 ಶತಕಗಳು ಹಾಗೂ 6 ಅರ್ಧ ಶತಕಗಳನ್ನು ಗಳಿಸಿದ್ದಾರೆ.
ಇದನ್ನೂ ಓದಿ: ಚೀನಾ ಮಣಿಸಿ ಏಷ್ಯನ್ ಚಾಂಪಿಯನ್ ಆದ ಭಾರತ!
2023 ಪಾಕಿಸ್ತಾನ ಪ್ರವಾಸದಲ್ಲಿ 297 ರನ್ ಗಳಿಸಿದ್ದ ಮಿಚೆಲ್, 2023 ವಿಶ್ವಕಪ್‌ನಲ್ಲಿ 552 ರನ್ ಗಳಿಸಿ, ಸೆಮಿ-ಫೈನಲ್‌ನಲ್ಲಿ ಭಾರತಕ್ಕೆ ಕಠಿಣ ಸ್ಪರ್ಧೆ ನೀಡಿದ್ದರು. ಅವರು ಸ್ಪಿನ್ ಬೌಲಿಂಗ್ ವಿರುದ್ಧ ನಿಪುಣ ಬ್ಯಾಟರ್
4. ಟ್ರಾವಿಸ್ ಹೆಡ್
ಟ್ರಾವಿಸ್ ಹೆಡ್ ಆಸೀಸ್ ತಂಡ ಸ್ಫೋಟಕ ಆಟಗಾರ ಎಂಬ ಖ್ಯಾತಿ ಹೊಂದಿದ್ದಾರೆ. 2022 ರಿಂದ ಮೊದಲ 10 ಓವರ್‌ಗಳಲ್ಲಿ 123.5 ಸ್ಟ್ರೈಕ್ ರೇಟ್‌ನೊಂದಿಗೆ ರನ್ ಗಳಿಸಿರುವ ಅವರು ವಿಶ್ವದಾದ್ಯಂತ ಮೊದಲ ಸ್ಥಾನದಲ್ಲಿದ್ದಾರೆ.
ಅವರು 2023 ಐಸಿಸಿ ಫೈನಲ್‌ಗಳಲ್ಲಿ ಅಮೋಘ ಶತಕ ಬಾರಿಸಿದ್ದು, ಭಾರತ ವಿರುದ್ಧ ಆಸ್ಟ್ರೇಲಿಯಾದ ಗೆಲುವಿಗೆ ಪ್ರಮುಖ ಕಾರಣರಾಗಿದ್ದರು. 2024 ಐಪಿಎ;ಲ್ನಲ್ಲಿ ಸನ್‌ರೈಸರ್ಸ್ ಹೈದರಾಬಾದ್ ತಂಡದ ಪರ 567 ರನ್ ಗಳಿಸಿದ್ದರು.
5. ಹ್ಯಾರಿ ಬ್ರೂಕ್
ಇಂಗ್ಲೆಂಡಿನ ನೂತನ ಬ್ಯಾಟಿಂಗ್ ಸೆನ್ಸೇಷನ್ ಹ್ಯಾರಿ ಬ್ರೂಕ್ ಏಕದಿನ ಕ್ರಿಕೆಟ್‌ನಲ್ಲಿ ಗಮನ ಸೆಳೆಯುತ್ತಿದ್ದಾರೆ. 23 ಇನ್ನಿಂಗ್ಸ್‌ನಲ್ಲಿ 769 ರನ್ ಗಳಿಸಿದ್ದು, 36.6 ಸರಾಸರಿ ಮತ್ತು 101.98 ಸ್ಟ್ರೈಕ್ ರೇಟ್ ಹೊಂದಿದ್ದಾರೆ.
ಆಸ್ಟ್ರೇಲಿಯಾದ ವಿರುದ್ಧದ ಸರಣಿಯಲ್ಲಿ 94 ಎಸೆತಗಳಲ್ಲಿ 110 ರನ್ ಬಾರಿಸಿದ್ದರು. ಅವರು ಶಾರ್ಟ್ ಪಿಚ್ ಎಸೆತಗಳನ್ನು ಚೆನ್ನಾಗಿ ಎದುರಿಸುತ್ತಿದ್ದು, ಪಾಕಿಸ್ತಾನ ಮತ್ತು ಯುಎಇ ಪರಿಸ್ಥಿತಿಗಳಿಗೆ ಹೊಂದಿಕೊಂಡು ಉತ್ತಮ ಆಟವಾಡಬಹುದು.