ಕೊಡಗು: ಕೇರಳ ಮೂಲದ ವ್ಯಕ್ತಿಯನ್ನು ಕೊಲೆ ಮಾಡಿದ್ದ ಐವರು ಆರೋಪಿಗಳನ್ನು ಬಂಧಿಸುವಲ್ಲಿ ಕೊಡಗು ಪೊಲೀಸರು ಯಶಸ್ವಿಯಾಗಿದ್ದಾರೆ.
ಕೊಡಗು ಜಿಲ್ಲೆಯ ಪೊನ್ನಪೇಟೆ ತಾಲ್ಲೂಕಿನ ಕೊಂಗಣ ಬಿ.ಶೆಟ್ಟಿಗೇರಿ ಗ್ರಾಮದ ಕಾಫಿ ತೋಟದ ಮನೆಯಲ್ಲಿ ಆಸ್ತಿ ವಿಚಾರಕ್ಕೆ ಕೊಲೆ ನಡೆದಿತ್ತು ಎನ್ನಲಾಗಿದೆ. ಈ ಬಗ್ಗೆ ಜಿಲ್ಲಾ ಎಸ್ಪಿ ರಾಮರಾಜನ್ ಮಾತನಾಡಿ, ಆರೋಪಿ ಅನಿಲ್ ಎನ್.ಎಸ್. ಬಳಿ ಆಸ್ತಿ ಇಲ್ಲ ಎಂದು ಯುವತಿಯ ಮನೆಯವರು ನಿರಾಕರಿಸಿದ್ದರು.
ಹೀಗಾಗಿ ಬೇಗ ಹಣ ಆಸ್ತಿ ಮಾಡುವ ಉದ್ದೇಶದಿಂದ ಕಣ್ಣೂರು ಜಿಲ್ಲೆಯ ಪ್ರದೀಪ್ ಕೊಯ್ಲಿ ಬಳಿ ಇದ್ದ ಆಸ್ತಿಯನ್ನು ತನ್ನದಾಗಿಸಿಕೊಳ್ಳಲು ಏ.23ರಂದು ಹಗ್ಗದಿಂದ ಕುತ್ತಿಗೆ ಬಿಗಿದು ಉಸಿರುಗಟ್ಟಿಸಿ ಜಿಲ್ಲೆಯ ಪ್ರದೀಪ್ ಕೊಯ್ಲಿಯನ್ನು ಹತ್ಯೆ ಮಾಡಲಾಗಿದೆ. ಸದ್ಯ ಪೊನ್ನಂಪೇಟೆ ತಾಲೂಕಿನ ಮುಗುಟಗೇರಿ ಗ್ರಾಮದ ಅನಿಲ್ ಎನ್.ಎಸ್.(25), ಸೋಮವಾರಪೇಟೆ ತಾಲೂಕಿನ ಅಬ್ಬೂರುಕಟ್ಟೆಯ ದೀಪಕ್(21), ನೇರುಗಳಲೆಯ ಸ್ವೀಫನ್ ಡಿಸೋಜ(26), ಹಿತ್ತಲಮಕ್ಕಿಯ ಕಾರ್ತಿಕ್, ನಲ್ಲೂರು ಗ್ರಾಮದ ಹರೀಶ್ ಪಿ.ಎಸ್.(29) ಎಂಬುವವರನ್ನು ಬಂಧಿಸಲಾಗಿದೆ. ಬಂಧಿತರಿಂದ 13.03 ಲಕ್ಷ ರೂ. ನಗದು, ಕೃತ್ಯಕ್ಕೆ ಬಳಸಿದ ಎರಡು ದ್ವಿಚಕ್ರ ವಾಹನ, 2 ಮೊಬೈಲ್, ಮೃತ ವ್ಯಕ್ತಿಯ ಮೊಬೈಲ್ ಮತ್ತು ಮೃತ ವ್ಯಕ್ತಿಗೆ ಸೇರಿದ ಆಸ್ತಿ ಪತ್ರಗಳನ್ನು ವಶ ಪಡಿಸಿಕೊಳ್ಳಲಾಗಿದೆ ಎಂದಿದ್ದಾರೆ.