ನಾಡ ದೋಣಿ ಮಗುಚಿ ಬಿದ್ದು ಮೀನುಗಾರ ಸಾವನ್ನಪ್ಪಿರುವ ಘಟನೆ ಉಡುಪಿ ಜಿಲ್ಲೆಯ ಪಡುಕೆರೆ ಕಡಲ ತೀರದಲ್ಲಿ ನಡೆದಿದೆ.
ಪಿತ್ರೋಡಿ ನಿವಾಸಿ ನೀಲು ಮೃತ ಮೀನುಗಾರ ಎಂದು ತಿಳಿದು ಬಂದಿದೆ. ಸಮುದ್ರದ ಅಲೆಯ ಹೊಡೆತಕ್ಕೆ ದೋಣಿ ಮಗುಚಿ ಈ ಅವಘಡ ಸಂಭವಿಸಿದೆ.
ದೋಣಿಯ ಅಡಿ ಬಲೆಗೆ ಸಿಕ್ಕಿ ಮೀನುಗಾರ ನೀಲು ಮೃತಪಟ್ಟಿದ್ದಾರೆ. ಅಜ್ಜರಕಾಡು ಜಿಲ್ಲಾ ಸರ್ಕಾರಿ ಆಸ್ಪತ್ರೆಗೆ ಮೃತ ಮೀನುಗಾರನ ದೇಹವನ್ನು ರವಾನೆ ಮಾಡಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಮಲ್ಪೆ ಪೊಲೀಸ್ ಠಾಣೆಯಲ್ಲಿ ಎಫ್.ಐ.ಆರ್ ದಾಖಲಾಗಿದೆ.