ಉಡುಪಿ: ಕರಾವಳಿಯ ಮಲ್ಪೆಯಲ್ಲಿ ಬಂಡರಿಯಲ್ಲಿನ ಏಷ್ಯಾದ ಅತಿ ದೊಡ್ಡ ಮೀನುಗಾರಿಕಾ ಕೇಂದ್ರದಲ್ಲಿ ಯುದ್ಧದ ಪರಿಣಾಮ ಮೀನುಗಾರಿಕೆಯನ್ನು ತೀವ್ರ ಸಂಕಷ್ಟಕ್ಕೆ ತಳ್ಳಿದೆ. ಹೋಟೆಲ್‌ಗಳ ಮುಚ್ಚುಗಡೆ ಮತ್ತು ಮೀನು ರಫ್ತಿನ ಸ್ಥಗಿತದಿಂದ ಮೀನಿನ ಬೆಲೆ ಪ್ರತಿ ಮೀನು 100–200 ರೂಪಾಯಿ ಇಳಿಕೆಯಾಗಿದೆ.
ಮಲ್ಪೆಯಿಂದ ಕೇರಳದ ಹೋಟೆಲ್‌ಗಳಿಗೆ ಕೋಟ್ಯಂತರ ರೂಪಾಯಿ ಮೌಲ್ಯದ ಮೀನು ರಫ್ತಾಗುತ್ತಿತ್ತು. ಆದರೆ ಈಗ ಹೋಟೆಲ್‌ಗಳು ಬಂದ್ ಆಗಿರುವ ಕಾರಣ, ಪೂರೈಕೆ ಸಂಪೂರ್ಣ ಸ್ಥಗಿತಗೊಂಡಿದೆ. ಅಡುಗೆ ಅನಿಲ (LPG) ಪೂರೈಕೆಯ ವ್ಯತ್ಯಯವು ಹೋಟೆಲ್ ಉದ್ಯಮಕ್ಕೆ ದೊಡ್ಡ ಹೊಡೆತ ನೀಡಿದ್ದು, ಇದರಿಂದ ಮೀನುಗಾರರ ವ್ಯಾಪಾರ ಮೇಲೆ ಪರೋಕ್ಷವಾಗಿ ಭಾರೀ ಪ್ರಭಾವ ಬೀರಿದೆ.
ಮೀನುಗಾರ ಮಹಿಳೆಯರು “ಯುದ್ಧ ಮುಗಿದರೆ ಸಾಕು, ಮರಳಿ ಜೀವನ ಮೊದಲಿನಂತಾಗಲಿ” ಎಂದು ನಿರೀಕ್ಷೆ ವ್ಯಕ್ತಪಡಿಸುತ್ತಿದ್ದಾರೆ. ಈ ಘಟನೆ ಮಲ್ಪೆ ಮೀನುಗಾರಿಕೆಗೆ ಮಾತ್ರವಲ್ಲ, ಕರಾವಳಿಯ ಸಮುದಾಯದ ಆರ್ಥಿಕ ಹಾಗೂ ಸಾಮಾಜಿಕ ಸ್ಥಿತಿಗೆ ತೀವ್ರ ಬಾಧೆಯನ್ನುಂಟುಮಾಡುತ್ತಿದೆ.
ಇದನ್ನೂ ಓದಿ : ಗೋ ಕಳ್ಳಸಾಗಣೆ ಮಾಡುತ್ತಿದ್ದ ಲಾರಿ ಡಿಕ್ಕಿಯಾಗಿ ಗೋರಕ್ಷಕ ಸಾವು!



















