ಸೂರ್ಯ ಗ್ರಹಣವಾಗಿರಬಹುದು ಅಥವಾ ಚಂದ್ರ ಗ್ರಹಣವಾಗಿರಬಹುದು ಎರಡೂ ಗ್ರಹಣಗಳು ಧಾರ್ಮಿಕ ಮತ್ತು ಜ್ಯೋತಿಷ್ಯ ದೃಷ್ಟಿಕೋನದಲ್ಲಿ ಮಹತ್ತರ ಸ್ಥಾನವನ್ನು ಹೊಂದಿದ ಸನ್ನಿವೇಶವಾಗಿದೆ. ಆಕಾಶದಲ್ಲಿ ನಡೆಯುವ ಈ ಘಟನೆಯು ಸಕಲ ಜೀವ ರಾಶಿಗಳ ಮೇಲೂ ತನ್ನ ಪ್ರಭಾವವನ್ನು ಬೀರುತ್ತದೆ. ಹಿಂದೂ ಧರ್ಮದಲ್ಲಿ, ಗ್ರಹಣಗಳನ್ನು ಅಶುಭ ಘಟನೆ ಎಂದು ಪರಿಗಣಿಸಲಾಗುತ್ತದೆ. ಗ್ರಹಣದ ದಿನದಂದು ಸಂಭವಿಸುವ ಸೂತಕ ಅವಧಿಯಲ್ಲಿ ಯಾವುದೇ ರೀತಿಯ ಪೂಜೆ, ಪುನಸ್ಕಾರಗಳನ್ನು ಮಾಡುವುದು ಅಶುಭವೆಂದು ಪರಿಗಣಿಸಲಾಗುತ್ತದೆ. ಫೆಬ್ರವರಿ 17, ಮಂಗಳವಾರದಂದು ನಡೆಯಲಿರುವ ಸೂರ್ಯ ಗ್ರಹಣವು 2026ರ ಮೊದಲನೇ ಸೂರ್ಯ ಗ್ರಹಣವಾಗಿದೆ.
– ಸೂರ್ಯ ಗ್ರಹಣದ ದಿನಾಂಕ: 2026ರ ಫೆಬ್ರವರಿ 17, ಮಂಗಳವಾರ
– ಭಾಗಶಃ ಗ್ರಹಣ ಆರಂಭ: ಮಧ್ಯಾಹ್ನ 3:26 ರಿಂದ
– ಗರಿಷ್ಠ ಗ್ರಹಣ ಪ್ರಾರಂಭ: ಸಂಜೆ 5:12
– ಅತ್ಯಂತ ಗರಿಷ್ಠ ಗ್ರಹಣ ಸಮಯ: ಸಂಜೆ 5:43
– ಗ್ರಹಣ ಅಂತ್ಯದತ್ತ ಸಾಗುವ ಸಮಯ: ಸಂಜೆ 6:12
– ಭಾಗಶಃ ಗ್ರಹಣ ಅಂತ್ಯಗೊಳ್ಳುವ ಸಮಯ: ಸಂಜೆ 7:58ಕ್ಕೆ
ಈ ಗ್ರಹಣ ಅಂಟಾರ್ಟಿಕ, ಆಫ್ರಿಕಾ, ದಕ್ಷಿಣ ಅಮೆರಿಕದಲ್ಲಿ ಗೋಚರವಾಗಲಿದ್ದು, ಭಾರತದಲ್ಲಿ ಇದರ ಗೋಚರತೆ ಇರುವುದಿಲ್ಲ.
ವೈದಿಕ ಗ್ರಂಥಗಳಲ್ಲಿ, ಗ್ರಹಣದಿಂದ ಸೂರ್ಯನು ಸಂಪೂರ್ಣವಾಗಿ ಬಂಧಿತನಾಗುವ ಮೊದಲು ಸೂತಕ ಅವಧಿಗೆ ಒಳಗಾಗುತ್ತಾನೆ. ಸೂರ್ಯ ಗ್ರಹಣಕ್ಕಿಂತ 12 ಗಂಟೆಗಿಂತ ಮೊದಲು ನಡೆಯುವಂತಹ ಈ ಸನ್ನಿವೇಶವನ್ನು ಆಧ್ಯಾತ್ಮಿಕವಾಗಿ ಅಶುದ್ಧವೆಂದು ಪರಿಗಣಿಸಲಾಗುತ್ತದೆ. ಭಾರತದಲ್ಲಿ ಗ್ರಹಣದ ಸೂತಕ ಅವಧಿಯು ಹಗಲಿನಲ್ಲಿ ಆರಂಭವಾಗುವುದರಿಂದ 2026ರ ಮೊದಲನೇ ಸೂರ್ಯ ಗ್ರಹಣವು ನಮಗೆ ಮಾನ್ಯವಾಗಿರುವುದಿಲ್ಲ. ಹಿಂದೂ ಶಾಸ್ತ್ರದಲ್ಲಿ ಹೇಳಿರುವ ಪ್ರಕಾರ, ಯಾವುದೇ ನಿರ್ದಿಷ್ಟ ಪ್ರದೇಶದಲ್ಲಿ ಗ್ರಹಣ ಗೋಚರಿಸದೇ ಇದ್ದರೆ ಅದರ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸುವ ಅವಶ್ಯಕತೆಯಿಲ್ಲ. ಆದ್ದರಿಂದ, ಈ ಗ್ರಹಣ ಅವಧಿಯಲ್ಲಿ ಅನೇಕ ದೈನಂದಿನ ಚಟುವಟಿಕೆಗಳು, ದೇವಾಲಯಗಳಿಗೆ ಭೇಟಿ ನೀಡುವುದು ಮತ್ತು ಶುಭ ಚಟುವಟಿಕೆಗಳನ್ನು ಭಾರತದಲ್ಲಿ ಮಾಡಬಹುದಾಗಿದೆ.
ಸೂರ್ಯ ಗ್ರಹಣದ ದಿನ ಈ ಮಂತ್ರಗಳನ್ನು ಪಠಿಸಿ
– ಸೂರ್ಯ ಮಂತ್ರ: ”ಓಂ ಹ್ರಾಂ ಹ್ರೀಂ ಹ್ರೌಂ ಸಃ ಸೂರ್ಯಾಯ ನಮಃ”
– ಆದಿತ್ಯ ಹೃದಯ ಸ್ತೋತ್ರವನ್ನು ಪಠಿಸಬಹುದು. ಸೂರ್ಯ ದೇವನಿಗೆ ಸಮರ್ಪಿತವಾದ ಈ ಒಂದು ಸ್ತೋತ್ರವನ್ನು ಪಠಿಸುವುದರಿಂದ ಆತ್ಮವಿಶ್ವಾಸ ಮತ್ತು ಧೈರ್ಯ ವೃದ್ಧಿಯಾಗುವುದು. ಆರೋಗ್ಯದ ಸಮಸ್ಯೆಗಳು ಪರಿಹಾರವಾಗುವುದು. ಶತ್ರುಗಳ ವಿರುದ್ಧ ಜಯ ಸಾಧಿಸಲು ಇದು ಸಹಾಯ ಮಾಡುವುದು.
– ಗಾಯತ್ರಿ ಮಂತ್ರ: ”ಓಂ ಭೂರ್ ಭುವಃ ಸ್ವಃ
ತತ್ಸವಿತುರ್ವರೇಣ್ಯಂ ಭರ್ಗೋ ದೇವಸ್ಯ ಧೀಮಹಿ
ಧಿಯೋ ಯೋ ನಃ ಪ್ರಚೋದಯಾತ್”.
– ಮಹಾಮೃತ್ಯುಂಜಯ ಮಂತ್ರ: “ಓಂ ತ್ರಯಂಬಕಂ ಯಜಾಮಹೇ
ಸುಗಂಧಿಂ ಪುಷ್ಟಿವರ್ಧನಂ
ಉರ್ವಾರುಕಮೇವ ಬಂಧನಾನ್
ಮೃತ್ಯೊರ್ಮುಕ್ಷೀಯ ಮಾಂಮೃತಾತ್



















