ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅಧ್ಯಕ್ಷತೆಯಲ್ಲಿ ಗ್ರೇಟರ್ ಬೆಂಗಳೂರು ಪ್ರಾಧಿಕಾರದ (ಜಿಬಿಎ) ಪ್ರಥಮ ಸಭೆ ಇಂದು ಸಂಜೆ 4 ಗಂಟೆಗೆ ಜಿಬಿಎ ಕೇಂದ್ರ ಕಛೇರಿಯ ಪೌರ ಸಭಾಂಗಣದಲ್ಲಿ ನಡೆಯಲಿದೆ.
ಈ ಸಭೆಯಲ್ಲಿ ಸಚಿವರು, ಶಾಸಕರು ಸೇರಿದಂತೆ 73 ಮಂದಿ ಸದಸ್ಯರು ಭಾಗವಹಿಸಲಿದ್ದು, ಜಿಬಿಎಯ ಅಧಿಕಾರ, ಮೇಲ್ವಿಚಾರಣೆ ಮತ್ತು ಕಾಮಗಾರಿಗಳ ಅನುಷ್ಠಾನದ ಕುರಿತು ಚರ್ಚೆಗಳು ನಡೆಯಲಿವೆ.
ಸಭೆಯಲ್ಲಿ ಜಿಬಿಎಯ ಉಪಾಧ್ಯಕ್ಷರಾಗಿರುವ ಡಿಸಿಎಂ ಡಿ.ಕೆ.ಶಿವಕುಮಾರ್, ಮುಖ್ಯ ಆಯುಕ್ತರಾದ ಮಹೇಶ್ವರ್ ರಾವ್, ಐದು ಪಾಲಿಕೆಯ ಆಯುಕ್ತರು ಹಾಗೂ ಅಧಿಕಾರಿಗಳು ಭಾಗಿಯಾಗಲಿದ್ದಾರೆ.
“ಯಾವೆಲ್ಲಾ ವಿಷಯ ಚರ್ಚೆಯಾಗಲಿದೆ”?
- ಒಣಗಿದ ಮರ, ಕೊಂಬೆಗಳನ್ನು ತೆರವಿಗೆ ಸೂಚನೆ ಸಾಧ್ಯತೆ
- ಜಿಬಿಎ ಗೆ ಸಂಭವಿಸಿದ ಕಾರ್ಯಸೂಚಿ ಬಗ್ಗೆ ಚರ್ಚೆ.
- ಟೌನ್ ಪ್ಲಾನ್ ಇಲಾಖೆಯಲ್ಲಿ ನಕ್ಷೆ ಮಂಜೂರಾತಿ ಬಗ್ಗೆ ಚರ್ಚೆ.
- ಟಿಡಿಆರ್ ಹಂಚಿಕೆ ಬಗ್ಗೆ ಚರ್ಚೆ.
- ಬಿ.ಸ್ಮೈಲ್ ನಿಗಮದಲ್ಲಿ ಕಾಮಗಾರಿಗಳ ಬಗ್ಗೆ ಚರ್ಚೆ ಹಾಗೂ ಕಾಮಗಾರಿಗಳನ್ನು ಕಾರ್ಯ ರೂಪಕ್ಕೆ ತರುವುದು.
- ಬ್ರಾಂಡ್ ಬೆಂಗಳೂರು ಕಾಮಗಾರಿಗಳನ್ನು ಕಾರ್ಯರೂಪಕ್ಕೆ ತರುವ ಬಗ್ಗೆ ಚರ್ಚೆ.
- ಜಿಬಿಎ ವ್ಯಾಪ್ತಿಯಲ್ಲಿ ಸಮಿತಿಗಳ ರಚನೆ.
- 5 ನಗರ ಪಾಲಿಕೆ ಬಜೆಟ್ ಗೆ ಅನುಮೋದನೆ.
- ಹೊಸದಾಗಿ ನಿರ್ಮಿಸಿದ 5 ನಗರಪಾಲಿಕೆಗಳಿಗೆ ಕಛೇರಿಯ ಜಾಗ ಹಂಚಿಕೆ.
- 5 ನಗರಪಾಲಿಕೆ ಗೆ ಸಿಬ್ಬಂದಿಗಳ ನೇಮಕ.
- ವೃಂದ ಮತ್ತು ನೇಮಕಾತಿ ಕಾಯ್ದೆ ಬಗ್ಗೆ ಚರ್ಚೆ.
- ಜಿಬಿಎಯಿಂದ ನಗರಪಾಲಿಕೆ ಗಳಿಗೆ ಅನುದಾನ ನೀಡುವ ಬಗ್ಗೆ ಚರ್ಚೆ.
- ಜಿಬಿಎ ವ್ಯಾಪ್ತಿಯಲ್ಲಿ ಬೃಹತ್ ಕಾಮಗಾರಿಗಳು, ಪ್ಲೈಓವರ್ ಗಳು,ಅಂಡರ್ ಪಾಸ್ ಗಳು,ಟನಲ್ ರಸ್ತೆ ನಿರ್ಮಾಣಗಳ ಬಗ್ಗೆ ಚರ್ಚೆ
- ನಗರದಲ್ಲಿ ಕಸ ನಿರ್ವಹಣೆ ಬಗ್ಗೆ ಚರ್ಚೆ
- ಇನ್ನೂ ಜಿಬಿಎ ವ್ಯಾಪ್ತಿಯ 5 ನಗರಪಾಲಿಕೆಗಳಿಗೆ ಕೆಲ ನಿರ್ದೇಶನ ನೀಡುವ ಸಾದ್ಯತೆ
- ಕಳೆದ ಒಂದು ತಿಂಗಳಿಂದ ಜಿಬಿಎ ವ್ಯಾಪ್ತಿಯ ೫ ನಗರಪಾಲಿಕೆಯ ಪ್ರಗತಿ ಹಾಗೂ ಕಾಮಗಾರಿಗಳ ಬಗ್ಗೆ ಚರ್ಚೆ
- 5 ನಗರಪಾಲಿಕೆಯ ಪ್ರಗತಿ ಪರಿಶೀಲನೆ
- ಈಗಾಗಲೇ ರಾಜ್ಯ ಸರ್ಕಾರದಿಂದ ಅನುದಾನ ಬಿಡುಗಡೆ ಆಗಿದೆ
- ಅನುದಾನದಲ್ಲಿ ಯಾವೇಲ್ಲ ಕಾಮಗಾರಿ ಮಾಡಿದಿರಿ
- ಪ್ರತಿ ನಗರಪಾಲಿಕೆಯಲ್ಲಿ ಎಷ್ಟು ಗುಂಡಿ ಮುಚ್ಚಿದಿರಿ
- ಗಣತಿ ಸರ್ವೆ ಎಷ್ಟು ಆಗಿದೆ
- ಪ್ರತಿ ಮನೆಗೂ ಬೇಟಿ ನೀಡಿ ಮಾಹಿತಿ ಸಂಗ್ರಹಿಸಬೇಕು
- ಇ- ಖಾತ ಎಷ್ಟು ವಿತರಣೆ ಆಗಿದೆ
- ಬಾಕಿ ಕಂದಾಯ ವಸೂಲಿಗೆ ಸೂಚನೆ ಸಾಧ್ಯತೆ
- ಬೀದಿ ನಾಯಿಗಳ ಹಾವಳಿಗೆ ಎನ್ನು ಕ್ರಮ ಕೈಗೊಳ್ಳಲಾಗಿದೆ
- ಪ್ರತಿ ನಗರಪಾಲಿಕೆ ಅಯುಕ್ತರು ವಾರ್ಡಗಳಿಗೆ ಬೇಟಿ ನೀಡಿ ಜನರ ಸಮಸ್ಯೆ ಅಳಿಸಬೇಕು
- ಮಳೆಗಾಲ ಹಿನ್ನೆಲೆಯಲ್ಲಿ ಡೆಂಘಿ ತಡೆಗಟ್ಟಲು ಸೂಚನೆ