ಜನವರಿ 11 ಮತ್ತು 12 ರಂದು ಎಸ್‌ಯುಎಫ್‌ಸಿ(SUFC)ಯ ಹಲಸೂರಿನಲ್ಲಿ ಟೂರ್ನಮೆಂಟ್ ಬೆಂಗಳೂರು ಮತ್ತು ಪುಣೆ ಕೇಂದ್ರಗಳಿಂದ ಆರು ವಯೋಮಾನದ ವಿಭಾಗಗಳಲ್ಲಿ 250ಕ್ಕೂ ಹೆಚ್ಚು ಆಟಗಾರರು ಭಾಗಿ .
ಬೆಂಗಳೂರು: ಸೌತ್ ಯುನೈಟೆಡ್ ಫುಟ್ಬಾಲ್ ಕ್ಲಬ್ (SUFC) ಇಂಟರ್-ಸಿಟಿ ಟೂರ್ನಮೆಂಟ್‌ನ ಪ್ರಥಮ ಆವೃತ್ತಿ 2025ರ ಜನವರಿ 11 ಮತ್ತು 12ರಂದು ನಡೆಯಲಿದೆ. ಇದು ಕ್ಲಬ್‌ನ ಫಸ್ಟ್ ಗ್ರೇಡ್ ಟೂರ್ನಮೆಂಟ್ ಆಗಿದ್ದು ಸೌತ್ ಯುನೈಟೆಡ್ ಫುಟ್ಬಾಲ್ ಅಕಾಡೆಮಿ (SUFA) ಪುಣೆಯ ತಂಡಗಳು SUFA ಬೆಂಗಳೂರು ತಂಡಗಳ ನಡುವೆ ಪಂದ್ಯಗಳು ನಡೆಯಲಿವೆ. ಪಂದ್ಯಗಳು ನಗರದ ಹಲಸೂರಿನ ಸೌತ್ ಯುನೈಟೆಡ್ ಫುಟ್ಬಾಲ್ ಕ್ಲಬ್‌ನಲ್ಲಿ ನಡೆಯಲಿವೆ.
ಈ ಟೂರ್ನಮೆಂಟ್‌ನಲ್ಲಿ 250ಕ್ಕೂ ಹೆಚ್ಚು ಯುವ ಫುಟ್ಬಾಲ್ ಆಟಗಾರರು ಪಾಲ್ಗೊಳ್ಳಲಿದ್ದಾರೆ. ಉದಯೋನ್ಮುಖ ಕ್ರೀಡಾಪಟುಗಳಿಗೆ ಉತ್ತೇಜನ ನೀಡಲು ಈ ಟೂರ್ನಮೆಂಟ್ ಅನ್ನು ಆಯೋಜಿಸಲಾಗಿದೆ.
ಪಂದ್ಯಾವಳಿಯು ಅಂಡರ್-7, ಅಂಡರ್-9, ಅಂಡರ್-11, ಅಂಡರ್-13, ಅಂಡರ್-15, ಮತ್ತು ಅಂಡರ್-17 ಸೇರಿ ಆರು ವಯೋಮಾನದ ವಿಭಾಗಗಳನ್ನು ಒಳಗೊಂಡಿರುತ್ತದೆ. ಈ ಟೂರ್ನಮೆಂಟ್ 2 ಎರಡು ದಿನಗಳ ಕಾಲ ನಡೆಯಲಿದೆ. ಮೊದಲ ದಿನ ರೌಂಡ್- ರಾಬಿನ್ ಲೀಗ್ ಹಂತದಲ್ಲಿ ಪಂದ್ಯಗಳು ಮತ್ತು ಎರಡನೇ ದಿನ ಸೆಮಿಫೈನಲ್ ಮತ್ತು ಫೈನಲ್ ಪಂದ್ಯಗಳು ನಡೆಯಲಿದೆ.
ಸ್ಪರ್ಧೆಯ ವೇಳೆ ಸೌತ್ ಯುನೈಟೆಡ್ ಸ್ಪೋರ್ಟ್ಸ್ ಫೌಂಡೇಷನ್‌ನ ಸ್ಪೋರ್ಟಿಂಗ್ ಡೈರೆಕ್ಟರ್ ಟೆರಿ ಫೀಲನ್ ಅವರನ್ನು ಭೇಟಿಯಾಗುವ ಮತ್ತು ಕ್ಲಬ್‌ನ ಹಿರಿಯ ತಂಡದ ಆಟಗಾರರೊಂದಿಗೆ ಮಾತುಕತೆ ಮಾಡುವ ಅವಕಾಶ ಕಿರಿಯ ಆಟಗಾರರಿಗೆ ಸಿಗಲಿದೆ. ಅದೇ ರೀತಿ ಜನವರಿ 11ರಂದು ಶ್ರೀ ಕಂಠೀರವ ಕ್ರೀಡಾಂಗಣದಲ್ಲಿ ನಡೆಯುವ ಬೆಂಗಳೂರು ಎಫ್‌ಸಿ ಮತ್ತು ಮೊಹಮ್ಮದನ್ ಎಸ್‌ಸಿ ನಡುವಿನ ಇಂಡಿಯನ್ ಸೂಪರ್ ಲೀಗ್ (ISL) ಪಂದ್ಯದ ವೀಕ್ಷಣೆಯ ಅವಕಾಶವೂ ಲಭ್ಯವಾಗಲಿದೆ. ಟೂರ್ನಿಯಲ್ಲಿ ಅತ್ಯುತ್ತಮ ಪ್ರದರ್ಶನ ನೀಡುವ ಆಟಗಾರರು ಸ್ಕಾಲರ್ ಶಿಪ್ ಗೆ ಆಯ್ಕೆಯಾಗಲಿದ್ದಾರೆ.
ಈ ಟೂರ್ನಮೆಂಟ್ ಬಗ್ಗೆ ಮಾತನಾಡಿದ ಸೌತ್ ಯುನೈಟೆಡ್ ಫುಟ್‌ಬಾಲ್ ಕ್ಲಬ್‌ನ ಸಿಇಒ ಪ್ರಣವ್ ಟ್ರೆಹಾನ್ (Pranav Trehan) ಅವರು “ಎಸ್‌ಯುಎಫ್‌ಸಿ ಇಂಟರ್-ಸಿಟಿ ಟೂರ್ನಮೆಂಟ್ ಭಾರತದಲ್ಲಿ ತಳಮಟ್ಟದ ಫುಟ್‌ಬಾಲ್ ಗೆ ಬೆಂಬಲ ನೀಡಲಿದೆ.
ಇದು ಕೇವಲ ಸ್ಪರ್ಧೆಯಲ್ಲ, ಯುವ ಆಟಗಾರರಿಗೆ ಪಂದ್ಯದ ಅನುಭವವನ್ನು ಪಡೆಯಲು ಮತ್ತು ಚಿಕ್ಕ ವಯಸ್ಸಿನಿಂದಲೇ ತಂತ್ರಗಳನ್ನು ಕಲಿಯಲು ಅವಕಾಶಗಳನ್ನು ಸೃಷ್ಟಿಸುವುದಾಗಿದೆ ಎಂದು ಹೇಳಿದರು.
ಪಂದ್ಯಾವಳಿಯ ಭಾಗವಾಗಿ, SUFC ಯ ಮುಖ್ಯ ಸ್ಕೌಟ್ ಮತ್ತು ವಿಶ್ಲೇಷಕ, ಇಂದ್ರೇಶ್ ನಾಗರಾಜನ್ ಆಟಗಾರರಿಗೆ ವಿಶೇಷ ಕಾರ್ಯಗಾರ ನಡೆಸಲಿದ್ದಾರೆ. ವಿಡಿಯೊ ವಿಶ್ಲೇಷಣೆಯನ್ನು ಬಳಸಿಕೊಂಡು ಪ್ರಮುಖ ಫುಟ್‌ಬಾಲ್ ಪರಿಕಲ್ಪನೆಗಳನ್ನು ಅರ್ಥ ಮಾಡಿಸಲಿದ್ದಾರೆ.
ಈ ಟೂರ್ನಮೆಂಟ್ ತಳಮಟ್ಟದ ಪ್ರತಿಭೆಯನ್ನು ಬೆಳೆಸುವಲ್ಲಿ , ಕ್ರೀಡೆ ಮತ್ತು ಶಿಕ್ಷಣದ ನಡುವೆ ಸೇತುವೆ ನಿರ್ಮಿಸುವಲ್ಲಿ ಸೌತ್ ಯುನೈಟೆಡ್ ಫುಟ್ಬಾಲ್ ಕ್ಲಬ್ ಪ್ರಮುಖ ಪಾತ್ರವಹಿಸಲಿದೆ.