ಬೆಂಗಳೂರು : ನಾಳೆ (ಸೆ.02) ಮಂಗಳವಾರದಂದು ನಟ ಕಿಚ್ಚ ಸುದೀಪ್ ನಾಯಂಡಹಳ್ಳಿ ನಂದಿಲಿಂಕ್ ಗ್ರೌಂಡ್ ನಲ್ಲಿ ಸೆ. 1ರ ರಾತ್ರಿ ಹುಟ್ಟುಹಬ್ಬವನ್ನು ಆಚರಿಸಿಕೊಳ್ಙಳುತ್ತಿದ್ದಾರೆ.
ಈ ವೇಳೆ ಕಿಚ್ಚನ ಮುಂದಿನ ಸಿನಿಮಾಗಳಾದ,’ಮ್ಯಾಕ್ಸ್-2′, ‘ಬಿಲ್ಲರಂಗಭಾಷಾ’ ಫಸ್ಟ್ ಲುಕ್ ರಿಲೀಸ್, ‘ಬಿಗ್ ಬಾಸ್-12’ ಪ್ರೊಮೊ ರಿಲೀಸ್ ಸಾಧ್ಯತೆ ಇದೆ ಎಂದು ತಿಳಿದುಬಂದಿದೆ.
“ಕಿಚ್ಚನ ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದ ಕ್ಷಣವಾದ ಹುಟ್ಟುಹಬ್ಬವನ್ನು ಅಮ್ಮನ ಅಗಲಿಕೆಯ ನೋವಲ್ಲಿ ಅದ್ದೂರಿಯಾಗಿ ಆಚರಣೆ ಮಾಡುವುದಿಲ್ಲ. ತಾಯಿಯಿಲ್ಲದ ಮೊದಲ ಕಿಚ್ಚನ ಹುಟ್ಟುಹಬ್ಬ ಇದಾಗಿದೆ” ಎಂದು ಸುದೀಪ್ ನೋವಿನಿಂದ ಹೇಳಿಕೊಂಡಿದಾರೆ.
ಸುದೀಪ್ ಹುಟ್ಟುಹಬ್ಬದ ಡಿಪಿಯನ್ನು ಶಿವಣ್ಣ ಬಿಡುಗಡೆ ಮಾಡಿದ್ದರು. ನಟ ಧ್ರುವ ಹಾಗೂ ಧನಂಜಯ್ ಕೂಡ ಸಾಥ್ ನೀಡಿದ್ದಾರೆ.



















